
ಇಶಾ ಸಿಂಗ್, ಮನು ಭಾಕರ್
ಕೈರೊ: ಭಾರತದ ಶೂಟರ್‌ಗಳಾದ ಇಶಾ ಸಿಂಗ್ ಮತ್ತು ಮನು ಭಾಕರ್ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಷಿಪ್‌ನ ಮಹಿಳೆಯರ 25 ಮೀ. ಸ್ಪೋರ್ಟ್ ಪಿಸ್ತೂಲ್ ಸ್ಪರ್ಧೆಯಲ್ಲಿ ಫೈನಲ್‌ಗೆ ಮುನ್ನಡೆದರು.
85 ಶೂಟರ್‌ಗಳದ್ದ ಅರ್ಹತಾ ಸುತ್ತಿನಲ್ಲಿ ಇಶಾ ನಾಲ್ಕನೇ ಸ್ಥಾನ ಮತ್ತು ಮನು ಏಳನೇ ಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಪಡೆದರು.
ಒಲಿಂಪಿಯನ್ ಇಶಾ 294 ಅಂಕಗಳನ್ನು ಗಳಿಸಿದರೆ, ಒಲಿಂಪಿಕ್ ಅವಳಿ ಪದಕ ವಿಜೇತೆ ಮನು 292 ಅಂಕಗಳನ್ನು ಸಂಪಾದಿಸಿದರು. ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಬ್ಬ ಶೂಟರ್ ರಾಹಿ ಸರ್ನೋಬತ್ 284 ಅಂಕಗಳೊಂದಿಗೆ 56ನೇ ಸ್ಥಾನ ಗಳಿಸಿದರು.
ಅರ್ಹತಾ ಸುತ್ತಿನಲ್ಲಿ ಟರ್ಕಿಯ ಸೆವ್ವಲ್ ಇಲೈಡಾ ತರ್ಹಾನ್ (299) ಅಗ್ರಸ್ಥಾನ ಪಡೆದರೆ, ಪ್ಯಾರಿಸ್ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ, ಫ್ರಾನ್ಸ್‌ನ ಕ್ಯಾಮಿಲ್ಲೆ ಜೆಡ್ರೆಜೆವ್ಸ್‌ಕಿ ಮತ್ತು ಇರಾನ್‌ನ ಹನಿಯೆ ರೋಸ್ಟಾಮಿಯನ್ ತಲಾ 295 ಅಂಕಗಳೊಂದಿಗೆ ನಂತರದ ಸ್ಥಾನ ಪಡೆದರು.
ಅರ್ಹತಾ ಸುತ್ತಿನಲ್ಲಿ ಅಗ್ರ ಎಂಟು ಸ್ಥಾನ ಪಡೆದ ಶೂಟರ್‌ಗಳು ಪದಕ ಸುತ್ತಿಗೆ ಮುನ್ನಡೆಯುತ್ತಾರೆ. ಶುಕ್ರವಾರ ಫೈನಲ್ ಸ್ಪರ್ಧೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.