ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್
ನವದೆಹಲಿ: ಎರಡು ಒಲಿಂಪಿಕ್ಸ್ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸನ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರು.
ಡೆನ್ಮಾರ್ಕ್ ದೇಶದ 31 ವರ್ಷದ ವಿಕ್ಟರ್ ಅವರು ಕಳೆದ ಹತ್ತು ವರ್ಷಗಳಲ್ಲಿ ಆಡಿದ ಆರನೇ ಇಂಡಿಯಾ ಓಪನ್ ಟೂರ್ನಿಯ ಫೈನಲ್ ಇದು. 2017 ಮತ್ತು 2019ರಲ್ಲಿಯೂ ಅವರು ಚಾಂಪಿಯನ್ ಆಗಿದ್ದರು.
ಈ ಸಲ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ವಿಕ್ಟರ್ 21–16, 21–8ರಿಂದ ಹಾಂಗ್‌ಕಾಂಗ್‌ನ ಲೀ ಚೆಕ್ ಯಿಯೂ ವಿರುದ್ಧ ಗೆದ್ದರು.
‘ಈ ಪ್ರಶಸ್ತಿಯು ನನಗೆ ವಿಶೇಷವಾದದ್ದು. ಪ್ಯಾರಿಸ್ ಒಲಿಂಪಿಕ್ಸ್ ನಂತರ ನಾನು ಗಾಯದ ಸಮಸ್ಯೆಗಳಿಂದ ಬಳಲಿದ್ದೆ. ತರಬೇತಿ ಮತ್ತು ಆತ್ಮವಿಶ್ವಾಸದ ಕೊರತೆ ಇತ್ತು. ಆದರೆ ಈ ವಾರ ಹಂತ ಹಂತವಾಗಿ ಲಯಕ್ಕೆ ಮರಳಿದೆ’ ಎಂದು ವಿಕ್ಟರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.