ADVERTISEMENT

ಜಮೈಕಾದ ವೇಗದ ಓಟಗಾರ ಅಸಾಫ ಪೋವೆಲ್ ನಿವೃತ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ನವೆಂಬರ್ 2022, 15:29 IST
Last Updated 27 ನವೆಂಬರ್ 2022, 15:29 IST
ಅಸಾಫ ಪೋವೆಲ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಚಿತ್ರ (ಚಿತ್ರಕೃಪೆ: Twitter / @officialasafa)
ಅಸಾಫ ಪೋವೆಲ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಚಿತ್ರ (ಚಿತ್ರಕೃಪೆ: Twitter / @officialasafa)   

ಪ್ಯಾರಿಸ್: ಜಮೈಕಾದ ವೇಗದ ಓಟಗಾರ ಅಸಾಫ ಪೋವೆಲ್‌ ಅವರು ತಮ್ಮ 40ನೇ ವರ್ಷದ ಜನ್ಮ ದಿನದಂದು ನಿವೃತ್ತಿ ಘೋಷಿಸಿದ್ದಾರೆ.

ಪೋವೆಲ್ ಅವರು 2005ರ ಜೂನ್‌ನಲ್ಲಿ 100 ಮೀ. ಓಟವನ್ನು ಕೇವಲ 9.77 ಸೆಕೆಂಡ್‌ಗಳಲ್ಲಿ ಕ್ರಮಿಸಿ ವಿಶ್ವದಾಖಲೆ ಬರೆದಿದ್ದರು. ನಂತರ ಆ ದಾಖಲೆಯನ್ನು 9.72 ಸೆಕೆಂಡ್‌ಗೆ ಉತ್ತಮಪಡಿಸಿಕೊಂಡಿದ್ದರು.

ನಿವೃತ್ತಿ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಪೋವೆಲ್‌, 'ಚಾಪ್ಟರ್‌ 40 ಮತ್ತು ವಿದಾಯ, ಬದುಕಿನ ಹೊಸ ಹಂತ. ನಾನು ಹೇಳಿದಂತೆ ಕ್ರೀಡೆಗೆ ವಿದಾಯ ಹೇಳುತ್ತಿದ್ದೇನೆ. ವೃತ್ತಿಬದುಕಿನುದ್ದಕ್ಕೂ ಹಾಗೂ ಈಗಲೂನನ್ನ ಪರವಾಗಿ ನಿಲ್ಲುವ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಅವಕಾಶ ಕಲ್ಪಿಸಿದ ಕ್ರೀಡೆಗೆ ಆಭಾರಿಯಾಗಿರುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ADVERTISEMENT

ಸದ್ಯ 100 ಮೀ. ಓಟದಲ್ಲಿ ವಿಶ್ವದಾಖಲೆ ಇರುವುದು ಜಮೈಕಾದವರೇ ಆದ ಉಸೇನ್ ಬೋಲ್ಟ್‌ ಅವರ ಹೆಸರಿನಲ್ಲಿ. ಅವರು 2009ರಲ್ಲಿ 100 ಮೀ. ಓಟವನ್ನು ಕೇವಲ 9.58 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು.

ವೇಗದ ಓಟದಲ್ಲಿ ಬೋಲ್ಟ್‌ ಪ್ರಾಬಲ್ಯ ಮೆರೆದ ನಂತರ ಪೋವೆಲ್‌ ಒಲಿಂಪಿಕ್ಸ್‌ನಲ್ಲಾಗಲೀ, ವಿಶ್ವಚಾಂಪಿಯನ್‌ಷಿಪ್‌ನಲ್ಲಾಗಲೀ ವೈಯಕ್ತಿಕ ವಿಭಾಗದಲ್ಲಿ ಒಮ್ಮೆಯೂ ಚೆನ್ನದ ಪದಕ ಗೆದ್ದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.