
ಪ್ರಜಾವಾಣಿ ವಾರ್ತೆ
ಬೆಂಗಳೂರು: ಕರ್ನಾಟಕದ ಪ್ರತೀತಿ ಬೋರ್ಡೊಲಾಯಿ ಅವರು ಜಮ್ಷೆಡ್‌ಪುರದಲ್ಲಿ ಬುಧವಾರ ಮುಕ್ತಾಯಗೊಂಡ 39ನೇ ರಾಷ್ಟ್ರೀಯ ಜೂನಿಯರ್ (19 ವರ್ಷದೊಳಗಿನವರ) ಬಾಲಕಿಯರ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ.
12 ವರ್ಷ ವಯಸ್ಸಿನ ಪ್ರತೀತಿ 11 ಸುತ್ತುಗಳಿಂದ 8.5 ಪಾಯಿಂಟ್ಸ್ ಕಲೆಹಾಕಿದರು. ಉತ್ತರ ಪ್ರದೇಶದ ಶುಭಿ ಗುಪ್ತಾ (9.5) ಮತ್ತು ತಮಿಳುನಾಡಿನ ನಿವೇದಿತಾ (9) ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದರು.
ಈ ಮೂವರು ಏಷ್ಯನ್ ಮತ್ತು ವಿಶ್ವ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅರ್ಹತೆ ಪಡೆದರು. ನಾಲ್ಕು ಮತ್ತು ಐದನೇ ಸುತ್ತಿನಲ್ಲಿ ಸೋತು ಆರನೇ ಸುತ್ತು ಡ್ರಾ ಮಾಡಿಕೊಂಡಿದ್ದಾಗ ಪ್ರತೀತಿ ಕೆಳಗಿನ ಸ್ಥಾನಕ್ಕೆ ಸರಿದಿದ್ದರು. ಆದರೆ ಕೊನೆಯ ಐದು ಪಂದ್ಯಗಳನ್ನು ಗೆದ್ದು ಮೊದಲ ಮೂರರಲ್ಲಿ ಸ್ಥಾನ ಪಡೆದರು.