
ನವದೆಹಲಿ: ಭಾರತದ ಅತಿಥ್ಯದಲ್ಲಿ ಜರುಗಲಿರುವ ಜೂನಿಯರ್ ಹಾಕಿ ವಿಶ್ವಕಪ್‌ನಿಂದ ಪಾಕಿಸ್ತಾನವು ಹಿಂದೆ ಸರಿದಿದೆ ಎಂದು ಅಂತರರಾಷ್ಟ್ರೀಯ ಹಾಕಿ ಒಕ್ಕೂಟವು(ಎಫ್‌ಐಎಚ್) ಶುಕ್ರವಾರ ತಿಳಿಸಿದೆ.
ನವೆಂಬರ್ 28 ರಿಂದ ಡಿಸೆಂಬರ್ 10ರವರೆಗೆ ಚೆನ್ನೈ ಹಾಗೂ ಮಧುರೈನಲ್ಲಿ ಟೂರ್ನಿ ನಡೆಯಲಿದೆ.
ಭಾರತದಲ್ಲಿ ನಡೆಯಲಿರುವ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ತಮ್ಮ ತಂಡವು ಪಾಲ್ಗೊಳ್ಳುವುದಿಲ್ಲ ಎಂದು ಪಾಕಿಸ್ತಾನ ಹಾಕಿ ಒಕ್ಕೂಟ ತಿಳಿಸಿದೆ ಎಂದು ಎಫ್‌ಐಎಚ್ ಹೇಳಿದೆ.
ಟೂರ್ನಿಯಲ್ಲಿ ಪಾಕಿಸ್ತಾನ ಬದಲಿಗೆ ಆಡಲಿರುವ ತಂಡವನ್ನು ಶೀಘ್ರದಲ್ಲಿ ಘೋಷಿಸಲಾಗುತ್ತದೆ ಎಂದು ತಿಳಿಸಿದೆ.
ಪಾಕಿಸ್ತಾನವು ಟೂರ್ನಿಯಿಂದ ಹಿಂದೆ ಸರಿದಿರುವ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಹಾಕಿ ಇಂಡಿಯಾ ಹೇಳಿದೆ.
ಟೂರ್ನಿಯಲ್ಲಿ ಪಾಕಿಸ್ತಾನವು ಬಿ ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಆ ಗುಂಪಿನಲ್ಲಿ ಭಾರತ, ಚಿಲಿ ಹಾಗೂ ಸ್ವಿಟ್ಜರ್ಲೆಂಡ್ ತಂಡಗಳು ಇವೆ.
ಆಪರೇಷನ್ ಸಿಂಧೂರ ನಂತರ ಬಿಹಾರದಲ್ಲಿ ನಡೆದಿದ್ದ ಪುರುಷರ ಹಾಕಿ ಏಷ್ಯಾ ಕಪ್‌ನಿಂದರೂ ಪಾಕ್ ತಂಡ ಹಿಂದೆ ಸರಿದಿತ್ತು.