ADVERTISEMENT

ಜೂನಿಯರ್‌ ರಾಷ್ಟ್ರೀಯ ಈಜು ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 15:59 IST
Last Updated 3 ಆಗಸ್ಟ್ 2025, 15:59 IST
.
.   

ಬೆಂಗಳೂರು: ಕರ್ನಾಟಕ ಈಜು ಸಂಸ್ಥೆಯ ಆಶ್ರಯದಲ್ಲಿ ಸೋಮವಾರದಿಂದ 41ನೇ ಸಬ್‌ ಜೂನಿಯರ್ ಈಜು ಹಾಗೂ  51ನೇ ರಾಷ್ಟ್ರೀಯ ಜೂನಿಯರ್‌ ವಾಟರ್‌ ಪೋಲೊ ಮತ್ತು ಡೈವಿಂಗ್‌ ಸ್ಪರ್ಧೆಗಳು ನಡೆಯಲಿವೆ. 

22 ರಾಜ್ಯಗಳ 600ಕ್ಕೂ ಅಧಿಕ ಈಜುಪಟುಗಳು ಈ ಕೂಟದಲ್ಲಿ ಭಾಗವಹಿಸಲಿದ್ದಾರೆ. ಡೈವಿಂಗ್ ಸ್ಪರ್ಧೆಗಳು ಹಲಸೂರಿನ ಕೆನ್ಸಿಂಗ್‌ಟನ್ ಈಜುಕೊಳದಲ್ಲಿ ನಡೆಯಲಿವೆ. ವಾಟರ್‌ ಪೋಲೊ ಸ್ಪರ್ಧೆಗಳು ಬಸವನಗುಡಿಯ ಈಜುಕೊಳದಲ್ಲಿ ನಡೆಯಲಿದ್ದು, ಬಾಲಕರ ವಿಭಾಗದಲ್ಲಿ 14 ತಂಡಗಳು ಹಾಗೂ ಬಾಲಕಿಯರ ವಿಭಾಗದಲ್ಲಿ 7 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಸತೀಶ್ ಕುಮಾರ್ ತಿಳಿಸಿದ್ದಾರೆ.

ಇಶಾನ್‌ ಮೆಹ್ರಾ, ವೇದಾಂತ ವಿ.ಎಂ., ಹಾಶಿಕಾ ಹಾಗೂ ರುಜುಲಾ ಅವರು ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳು ಎನಿಸಿದ್ದಾರೆ.

ADVERTISEMENT

ರಾಜ್ಯ ತಂಡ: ಬಾಲಕರು: ಇಶಾನ್‌ ಮೆಹ್ರಾ, ಆರ್ಯನ್‌ ಭಟ್‌, ಆರ್‌. ನವನೀತ್‌ ಗೌಡ, ದಕ್ಷಣ್‌ ಎಸ್‌., ಮೋನಿಷ್‌ ಪಿ.ವಿ., ಸೋಹಂ ಮಂಡಲ್‌, ದರ್ಶನ್‌ ಎಸ್‌., ಸ್ವರೂಪ್‌ ಡಿ., ಆರ್ಯನ್‌ ಪಾಟೀಲ, ಸಮರ್ಥ್‌ ಗೌಡ ಬಿ.ಎಸ್‌., ಅಮನ್‌ ಎ.ಎಸ್‌., ವೇದಾಂತ ವಿ.ಎಂ., ಯಶ್‌ ಕಾರ್ತಿಕ್‌, ಆಯುಷ್‌ ಎಂ.ಎಸ್‌., ವಿಶಾಖನ್ ಶರವಣನ್‌, ಯಶ್‌ ಎಚ್‌. ಪಾಲ್‌, ಸಾಯೀಶ್‌ ಕಿಣಿ, ಹರಿಕಾರ್ತಿಕ್‌ ವೇಲು, ಅನೀಶ್‌ ಅನಿರುದ್ಧ ಕೋರೆ, ಸೂರ್ಯ ಜೆ.ಟಿ., ರಾಘವ್‌ ಎಸ್‌. ಹಾಗೂ ಪೃಥ್ವಿಜೀತ್‌ ಮೆನನ್‌

ಬಾಲಕಿಯರು: ರುಜುಲಾ ಎಸ್‌., ಚರಿತಾ ಪಿ., ಸುಹಾಸಿನಿ ಘೋಷ್‌, ಹಾಶಿಕಾ ರಾಮಚಂದ್ರ, ವಿಹಿತಾ ನಯನ, ಶ್ರೀಚರಣಿ ಟಿ., ಮೀನಾಕ್ಷಿ ಮೆನನ್‌, ತಾನ್ಯಾ ಎಸ್‌., ಅದಿತಿ ವಿನಾಯಕ್‌, ಹಿತಶ್ರೀ ಎನ್., ಸಿದ್ಧಿ ಶಾ, ನೈಶಾ, ಇಂಚರಾ ಪಿ., ಮಾನವಿ ವರ್ಮಾ, ಹಿಯಾ ಎಂ., ರಿಯಾನ್ನ ಡಿ. ಫರ್ನಾಂಡೀಸ್‌, ಸಮನ್ವಿ ಇ.ಎಸ್‌., ತನಿಷಿ ಗುಪ್ತಾ ಹಾಗೂ ಅಂಜಲಿ ಹೊಸಕೆರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.