ADVERTISEMENT

ಕಬಡ್ಡಿ: ತಲೈವಾಸ್‌ ಜಯಭೇರಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 17:31 IST
Last Updated 21 ನವೆಂಬರ್ 2022, 17:31 IST

ಹೈದರಾಬಾದ್‌ (ಪಿಟಿಐ): ನರೇಂದರ್‌ ಅವರ ಸೊಗಸಾದ ಆಟದ ಬಲದಿಂದ ತಮಿಳ್‌ ತಲೈವಾಸ್‌ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ 35–30 ರಲ್ಲಿ ಬೆಂಗಾಲ್‌ ವಾರಿಯರ್ಸ್‌ ತಂಡವನ್ನು ಮಣಿಸಿತು.

ಗಚಿಬೌಳಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ನರೇಂ ದರ್‌ 13 ಪಾಯಿಂಟ್ಸ್‌ ತಂದಿತ್ತರು. ಬೆಂಗಾಲ್ ತಂಡದ ಮಣಿಂದರ್ ಸಿಂಗ್‌ ಅವರು 15 ಪಾಯಿಂಟ್ಸ್‌ ಗಳಿಸಿ ಸೋಲಿನ ನಡುವೆಯೂ ಮಿಂಚಿದರು.

ಆರಂಭದಿಂದಲೇ ಆಕ್ರಮಣಕಾರಿ ಪ್ರದರ್ಶನ ನೀಡಿದ ತಲೈವಾಸ್‌ ತಂಡ ಮೊದಲಾರ್ಧ ಕೊನೆಗೊಂಡಾಗ 21–13 ರಲ್ಲಿ ಮುನ್ನಡೆ ಸಾಧಿಸಿತ್ತು.

ADVERTISEMENT

ದಿನದ ಎರಡನೇ ಪಂದ್ಯದಲ್ಲಿ ಯು.ಪಿ.ಯೋಧಾಸ್‌ 35–31 ರಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಗೆದ್ದಿತು. ಪ್ರದೀಪ್‌ ನರ್ವಾಲ್‌ (9) ಅವರು ಯೋಧಾಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇಂದಿನ ಪಂದ್ಯಗಳು

ಯು ಮುಂಬಾ– ತಮಿಳ್‌ ತಲೈವಾಸ್‌

ತೆಲುಗು ಟೈಟನ್ಸ್‌– ಪಟ್ನಾ ಪೈರೇಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.