ADVERTISEMENT

KOA Awards: 18 ಸಾಧಕರಿಗೆ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಪ್ರಶಸ್ತಿ

ಇಂದು ಪ್ರಶಸ್ತಿ ಪ್ರದಾನ: ಉನ್ನತಿ, ಆಯುಷ್‌, ನಿಖಿಲ್‌ಗೆ ಗೌರವ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 0:30 IST
Last Updated 21 ಡಿಸೆಂಬರ್ 2025, 0:30 IST
ಉನ್ನತಿ ಅಯ್ಯಪ್ಪ
ಉನ್ನತಿ ಅಯ್ಯಪ್ಪ   

ಬೆಂಗಳೂರು: ಉದಯೋನ್ಮುಖ ಅಥ್ಲೀಟ್‌ ಬಿ.ಉನ್ನತಿ ಅಯ್ಯಪ್ಪ, ಬ್ಯಾಡ್ಮಿಂಟನ್‌ ತಾರೆ ಆಯುಷ್‌ ಶೆಟ್ಟಿ, ಫುಟ್‌ಬಾಲ್‌ ಆಟಗಾರ ನಿಖಿಲ್‌ ರಾಜ್‌ ಎಂ, ಗಾಲ್ಫ್‌ ಪ್ರತಿಭೆ ಪ್ರಣವಿ ಎಸ್‌. ಅರಸ್‌ ಸೇರಿದಂತೆ 18 ಸಾಧಕರನ್ನು ಕರ್ನಾಟಕ ಒಲಿ‍ಂಪಿಕ್ ಸಂಸ್ಥೆಯ (ಕೆಒಎ) 22ನೇ ವರ್ಷದ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪುರಸ್ಕೃತರು:

ಬಿ.ಉನ್ನತಿ ಅಯ್ಯಪ್ಪ (ಅಥ್ಲಿಟಿಕ್ಸ್‌),

ADVERTISEMENT

ಆಯುಷ್‌ ಶೆಟ್ಟಿ (ಬ್ಯಾಡ್ಮಿಂಟನ್‌),

ಪ್ರತ್ಯಾಂಶು ತೋಮರ್‌ (ಬ್ಯಾಸ್ಕೆಟ್‌ಬಾಲ್‌),

ಎಸ್‌.ತನ್ವಿ (ಫೆನ್ಸಿಂಗ್‌),

ನಿಖಿಲ್‌ರಾಜ್‌ ಎಂ (ಫುಟ್‌ಬಾಲ್‌),

ಪ್ರಣವಿ ಎಸ್‌.ಅರಸ್‌ (ಗಾಲ್ಫ್‌),

ಉದಯ್‌ ನಾಯ್ಡು (ಜಿಮ್ನಾಸ್ಟಿಕ್‌),

ಐಶ್ವರ್ಯಾ ವಿ. (ಕಯಾಕಿಂಗ್‌ ಮತ್ತು ಕೆನೊಯಿಂಗ್‌),

ಎಸ್‌.ಡಿ. ಪ್ರಜ್ವಲ್‌ ದೇವ್‌ (ಟೆನಿಸ್‌),

ಜಗದೀಪ್‌ ದಯಾಳ್‌ (ಹಾಕಿ),

ಸುಜನ್‌ (ನೆಟ್‌ಬಾಲ್‌),

ದಿವ್ಯಾ ಟಿ.ಎಸ್‌. (ರೈಫಲ್‌ ಶೂಟಿಂಗ್‌),

ಆಕಾಶ್‌ ಮಣಿ (ಈಜು),

ಆಕಾಶ್‌ ಕೆ.ಜೆ (ಟೇಬಲ್‌ ಟೆನಿಸ್‌),

ಸತೀಶ್‌ ಬಸವರಾಜ್‌ (ಪತ್ರಿಕಾ ಛಾಯಾಗ್ರಾಹಕ).

ಜೀವಮಾನದ ಸಾಧನೆಗಾಗಿ:

ಪಿ.ಎಸ್‌.ಜರೀನಾ (ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಆಟಗಾರ),

ಮುಕುಂದ್‌ ಕಿಲ್ಲೇಕರ್‌ (ಅಂತರರಾಷ್ಟ್ರೀಯ ಬಾಕ್ಸರ್‌),

ವಿ.ಎಸ್‌.ವಿನಯ (ಅಂತರರಾಷ್ಟ್ರೀಯ ಹಾಕಿ ಆಟಗಾರ).

ಇಂದು ಪ್ರಶಸ್ತಿ ಪ್ರದಾನ:

ಲೋಕ ಭವನದ ಗಾಜಿನ ಮನೆಯಲ್ಲಿ ಇದೇ 21ರಂದು ಬೆಳಿಗ್ಗೆ 11.30ಕ್ಕೆ  ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುವರು.

ಗೃಹ ಸಚಿವ ಡಾ.ಜಿ.ಪರಮೇಶ್ವರ, ಶಾಸಕ ರಿಜ್ವಾನ್‌ ಅರ್ಷದ್‌ ಭಾಗವಹಿಸುವರು. ಪ್ರಶಸ್ತಿ ಪುರಸ್ಕೃತರಿಗೆ ನಗದು, ಸ್ಮರಣಿಕೆ ಮತ್ತು ಪ್ರಮಾಣಪತ್ರ ನೀಡಲಾಗುವುದು ಎಂದು ಕೆಒಎ ಮಹಾಪ್ರಧಾನ ಕಾರ್ಯದರ್ಶಿ ಟಿ.ಅನಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಯುಷ್‌ ಶೆಟ್ಟಿ
ಪ್ರಣವಿ ಅರಸ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.