ADVERTISEMENT

ಖೇಲೊ ಇಂಡಿಯಾ: ಅಥ್ಲೆಟಿಕ್ಸ್‌ನಲ್ಲಿ ಮಂಗಳೂರು ವಿವಿಯ ಲಕ್ಷ್ಮಿಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 6:41 IST
Last Updated 30 ಏಪ್ರಿಲ್ 2022, 6:41 IST
ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ಕೆ.ಎಂ. ಲಕ್ಷ್ಮಿ
ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ಕೆ.ಎಂ. ಲಕ್ಷ್ಮಿ   

ಬೆಂಗಳೂರು: ಇಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಶುಭಾರಂಭ ಮಾಡಿದೆ.

ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ಕೆ.ಎಂ. ಲಕ್ಷ್ಮಿ ಅವರು ಮಹಿಳೆಯರ 10 ಸಾವಿರ ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಬೆಳಿಗ್ಗೆ ನಡೆದ ಸ್ಪರ್ಧೆಯಲ್ಲಿ ಅವರು 35 ನಿಮಿಷ 49.23 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ತ್ರೀವ್ರ ಪೈಪೋಟಿ ನೀಡಿದ ಮಹರ್ಷಿ ದಯಾನಂದ ವಿವಿಯ ಭಾರತಿ ಮತ್ತು ಬಧೊ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು. ಭಾರತಿ 36 ನಿಮಿಷ 20.25 ಸೆಕೆಂಡುಗಳಲ್ಲಿ ಗುರಿ ಸೇರಿದರೆ ಬಧೋ 36 ನಿಮಿಷ 44.40 ಸೆಕೆಂಡು ತೆಗೆದುಕೊಂಡರು.

ಜನನಾಯಕ್ ಚಂದ್ರಶೇಖರ್ ವಿವಿಯ ಆರಿಫ್ ಅಲಿ ಖಾನ್ ಅವರು ಆಥ್ಲೆಟಿಕ್ಸ್‌ನ ಮೊದಲ ಸ್ಪರ್ಧೆಯಾದ ಪುರುಷರ 10 ಸಾವಿರ ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದರು. 30 ನಿಮಿಷ 26.40 ಸೆಕೆಂಡುಗಳಲ್ಲಿ ಅವರು ಗುರಿಮುಟ್ಟಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.