ADVERTISEMENT

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕೇಲೇಟಿರ, ಮತ್ರಂಡ ತಂಡಗಳಿಗೆ ರೋಚಕ ಜಯ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 23:30 IST
Last Updated 12 ಏಪ್ರಿಲ್ 2025, 23:30 IST
ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಶನಿವಾರದ ಪಂದ್ಯದಲ್ಲಿ ನಾಪಂಡ ಮತ್ತು ಆದೇಂಗಡ ತಂಡದ ಆಟಗಾರರು ಸೆಣೆಸಿದರು
ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಶನಿವಾರದ ಪಂದ್ಯದಲ್ಲಿ ನಾಪಂಡ ಮತ್ತು ಆದೇಂಗಡ ತಂಡದ ಆಟಗಾರರು ಸೆಣೆಸಿದರು   

ಮಡಿಕೇರಿ: ಕೇಲೇಟಿರ ಹಾಗೂ ಮತ್ರಂಡ ತಂಡಗಳು ಇಲ್ಲಿನ ಫೀಲ್ಡ್‌ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿ ‘ಮುದ್ದಂಡ ಕಪ್‌’ ಪಂದ್ಯಗಳಲ್ಲಿ ಶನಿವಾರ ಜಯ ದಾಖಲಿಸಿದವು.

ಕೇಲೇಟಿರ ತಂಡವು 3–2 ಅಂತರದಿಂದ ಕುಪ್ಪಂಡ (ನಾಂಗಾಲ) ತಂಡವನ್ನು ಮಣಿಸಿತು. ವಿಜೇತ ತಂಡದ ಪರ ಸುಬ್ರಮಣಿ, ಕವನ್ ಕಾಳಪ್ಪ ಹಾಗೂ ನಿಶ್ಚಯ್ ಮುತ್ತಣ್ಣ ತಲಾ 1 ಗೋಲು ದಾಖಲಿಸಿದರು. ಕುಪ್ಪಂಡ ಪರ ಶರತ್ ಚಿಣ್ಣಪ್ಪ ಹಾಗೂ ಗೌರವ್ ಗಣಪತಿ ತಲಾ 1 ಗೋಲು ಹೊಡೆದರು.

ಮಾಳೇಟಿರ (ಕೆದಮುಳ್ಳೂರು) ಮತ್ತು ಮತ್ರಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ನಿಗದಿತ ಅವಧಿಯಲ್ಲಿ ತಲಾ 2 ಗೋಲು ಗಳಿಸಿ ಸಮಬಲ ಸಾಧಿಸಿದವು. ಟೈ ಬ್ರೇಕರ್‌ನಲ್ಲಿ 4-3 ಗೋಲುಗಳ ಅಂತರದಲ್ಲಿ ಮತ್ರಂಡ ತಂಡ ಜಯ ಸಾಧಿಸಿ ನಿಟ್ಟುಸಿರು ಬಿಟ್ಟಿತು.

ADVERTISEMENT

ಚೋಡುಮಾಡ ಮತ್ತು ಅನ್ನಾಡಿಯಂಡ ನಡುವಿನ ಪಂದ್ಯದಲ್ಲೂ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ 1 ಗೋಲು ಗಳಿಸಿ ಸಮಬಲ ಸಾಧಿಸಿದವು. ಟೈ ಬ್ರೇಕರ್‌ನಲ್ಲಿ 3-2 ಗೋಲುಗಳ ಅಂತರದಲ್ಲಿ ಅನ್ನಾಡಿಯಂಡ ಗೆಲುವು ದಾಖಲಿಸಿತು.

ಸಿದ್ದಾಂತ್, ಆದರ್ಶ್, ಸೋಮಯ್ಯ ಹಾಗೂ ಉತ್ತಪ್ಪ ಅವರ ಗೋಲುಗಳ ನೆರವಿನಿಂದ ಚೆಕ್ಕೇರ 4–0 ಅಂತರದಿಂದ ಮನೆಯಪಂಡ ವಿರುದ್ಧ ಭರ್ಜರಿ ಗೆಲುವು ಪಡೆಯಿತು.

ಕಳೆದ ಬಾರಿಯ ಟೂರ್ನಿಯ ಆಯೋಜಕರಾದ ಕುಂಡ್ಯೋಳಂಡ 2-0 ಯಿಂದ ಮೂಕೋಂಡ ವಿರುದ್ಧ ಗೆಲುವಿನ ನಗೆಬೀರಿತು.

ಉಳಿದಂತೆ, ನಾಪಂಡ 3-0ಯಿಂದ ಆದೇಂಗಡ ವಿರುದ್ಧ, ಕೋಳೇರ 2-0ಯಿಂದ ಮಾರ್ಚಂಡ ವಿರುದ್ಧ, ಶಾಂತೆಯಂಡ 2-0ಯಿಂದ ಅಪ್ಪಚೆಟ್ಟೋಳಂಡ ವಿರುದ್ಧ, ಪರದಂಡ 3-1ರಿಂದ ಮುಂಡ್ಯೋಳಂಡ ವಿರುದ್ಧ, ಪಾಡೆಯಂಡ 3-1ರಿಂದ ಮೈಂದಪಂಡ ವಿರುದ್ಧ, ಐನಂಡ 2-0ಯಿಂದ ಮಲ್ಲಮಾಡ ವಿರುದ್ಧ ಗೆಲುವು ಪಡೆದವು.

ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಶನಿವಾರದ ಪಂದ್ಯದಲ್ಲಿ ಚೋಡುಮಾಡ ಮತ್ತು ಅನ್ನಾಡಿಯಂಡ ತಂಡದ ಆಟಗಾರರು ಚೆಂಡಿನ ಮೇಲೆ ನಿಯಂತ್ರಣಕ್ಕಾಗಿ ಸೆಣೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.