ADVERTISEMENT

ಮೆಸ್ಸಿ, ಫ್ರೇಸರ್‌ ಪ್ರೈಸ್‌ಗೆ ಲಾರಿಯಸ್‌ ಗೌರವ

ಎಪಿ
Published 9 ಮೇ 2023, 19:34 IST
Last Updated 9 ಮೇ 2023, 19:34 IST
ಪ್ರಶಸ್ತಿಯೊಂದಿಗೆ ಲಯೊನೆಲ್‌ ಮೆಸ್ಸಿ
ಪ್ರಶಸ್ತಿಯೊಂದಿಗೆ ಲಯೊನೆಲ್‌ ಮೆಸ್ಸಿ    –ಎಎಫ್‌ಪಿ ಚಿತ್ರ

ಪ್ಯಾರಿಸ್‌: ಅರ್ಜೆಂಟೀನಾದ ಫುಟ್‌ಬಾಲ್‌ ಅಟಗಾರ ಲಯೊನೆಲ್‌ ಮೆಸ್ಸಿ ಅವರು ಪ್ರತಿಷ್ಠಿತ ‘ಲಾರಿಯಸ್‌ ವರ್ಷದ ಕ್ರೀಡಾಪಟು’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಈ ಗೌರವ ಜಮೈಕದ ವೇಗದ ಓಟಗಾರ್ತಿ ಶೆಲ್ಲಿ ಆ್ಯನ್‌ ಫ್ರೇಸರ್‌ ಪ್ರೈಸ್‌ ಅವರಿಗೆ ಒಲಿದಿದೆ.

2022 ರಲ್ಲಿ ತೋರಿದ ಸಾಧನೆಯನ್ನು ಗುರುತಿಸಿ ಇಬ್ಬರನ್ನೂ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ಯಾರಿಸ್‌ನಲ್ಲಿ ಸೋಮವಾರ ರಾತ್ರಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ 2022 ರಲ್ಲಿ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯನ್ನು ಗೆದ್ದುಕೊಂಡಿತ್ತು. ಮೆಸ್ಸಿ ಅವರು 2020 ರಲ್ಲಿ ಫಾರ್ಮುಲಾ 1 ಚಾಲಕ ಲೆವಿಸ್‌ ಹ್ಯಾಮಿಲ್ಟನ್‌ ಅವರೊಂದಿಗೆ ಜಂಟಿಯಾಗಿ ಈ ಗೌರವ ಪಡೆದುಕೊಂಡಿದ್ದರು.

ADVERTISEMENT

ಶೆಲ್ಲಿ ಅವರು 2022ರ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 100 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದರಲ್ಲದೆ, ಐದನೇ ಬಾರಿ ಈ ಸಾಧನೆ ಮಾಡಿದ್ದರು.

ಸ್ಪೇನ್‌ನ ಯುವ ಟೆನಿಸ್ ಆಟಗಾರ ಕಾರ್ಲೊಸ್‌ ಅಲ್ಕರಾಜ್‌ ಅವರು ‘ಬ್ರೇಕ್‌ಥ್ರೂ ಆಫ್‌ ದಿ ಇಯರ್‌’ ಗೌರವಕ್ಕೆ ಪಾತ್ರರಾದರು. ಕಳೆದ ವರ್ಷ ಅಮೆರಿಕ ಓಪನ್‌ ಟೂರ್ನಿ ಗೆದ್ದಿದ್ದ ಅವರು ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದರು.

ಪ್ರಶಸ್ತಿಯೊಂದಿಗೆ ಫ್ರೇಸರ್‌ ಪ್ರೈಸ್‌ –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.