ADVERTISEMENT

ಅನಂತ್ ಅಂಬಾನಿ ಒಡೆತನದ ವನತಾರಗೆ ಭೇಟಿ ನೀಡಿದ ಫುಟ್‌ಬಾಲ್ ದಿಗ್ಗಜ ಮೆಸ್ಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2025, 5:39 IST
Last Updated 18 ಡಿಸೆಂಬರ್ 2025, 5:39 IST
<div class="paragraphs"><p>ವಂತಾರದಲ್ಲಿ ಪ್ರಾಣಿಗಳ ಜೊತೆ ಫುಟ್‌ಬಾಲ್ ದಿಗ್ಗಜ ಲಿಯೋನಲ್ ಮೆಸ್ಸಿ</p></div>

ವಂತಾರದಲ್ಲಿ ಪ್ರಾಣಿಗಳ ಜೊತೆ ಫುಟ್‌ಬಾಲ್ ದಿಗ್ಗಜ ಲಿಯೋನಲ್ ಮೆಸ್ಸಿ

   

ಚಿತ್ರ: ವಂತಾರಾ

ಜಾಗತಿಕ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರು ಅನಂತ್ ಅಂಬಾನಿ ಮಾಲೀಕತ್ವದ ವನ್ಯಜೀವಿ ರಕ್ಷಣೆ, ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರವಾಗಿರುವ ವನತಾರಗೆ ಭೇಟಿ ನೀಡಿದರು.

ADVERTISEMENT

ಮೆಸ್ಸಿಯವರ ಜೊತೆ ಇಂಟರ್ ಮಿಯಾಮಿ ತಂಡದ ಸಹ ಆಟಗಾರ ಲೂಯಿಸ್ ಸುವಾರೆಜ್ ಮತ್ತು ರೊಡ್ರಿಗೋ ಡಿ ಪಾಲ್ ಅವರ ಜೊತೆಗೆ ವನತಾರಗೆ ಭೇಟಿ ನೀಡಿದರು.

ಫುಟ್‌ಬಾಲ್ ದಂತಕಥೆ ಮೆಸ್ಸಿಯವರು ದೇವಾಲಯದಲ್ಲಿ ನಡೆದ ಮಹಾ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

ಅಪರೂಪದ ಭೇಟಿ ವೇಳೆ ಜಾನಪದ ಸಂಗೀತ, ಹೂಮಳೆ ಮತ್ತು ವಿಧ್ಯುಕ್ತ ಆರತಿ ಜೊತೆಗೆ ಅವರನ್ನು ಭವ್ಯವಾಗಿ, ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತಿಸಿದರು.

ಮೆಸ್ಸಿಯವರು ವನತಾರದ ವಿಸ್ತಾರವಾದ ಉದ್ಯಾನವನದಲ್ಲಿ ಪ್ರವಾಸ ಕೈಗೊಂಡರು. ಈ ವೇಳೆ ಅವರು, ವಿವಿಧ ಫ್ರಾಣಿಗಳನ್ನು ನೋಡಿ ಸಂತಸಪಟ್ಟರು.

ವನತಾರದಲ್ಲಿ ಗಾಜಿನ ಹೊರಭಾಗದಿಂದ ಸಿಂಹವನ್ನು ವೀಕ್ಷಿಸಿದ ಲಿಯೋನೆಲ್ ಮೆಸ್ಸಿ

ಸಹ ಆಟಗಾರರ ಜೊತೆ ಪ್ರಾಣಿಗಳನ್ನು ವೀಕ್ಷಿಸಿದ ಮೆಸ್ಸಿ