ADVERTISEMENT

London Chess Classic Open 2025: ಅಗ್ರಸ್ಥಾನ ಹಂಚಿಕೊಂಡ ಪ್ರಜ್ಞಾನಂದ

ಲಂಡನ್ ಚೆಸ್‌ ಕ್ಲಾಸಿಕ್ ಓಪನ್

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 13:18 IST
Last Updated 4 ಡಿಸೆಂಬರ್ 2025, 13:18 IST
ಆರ್‌. ಪ್ರಜ್ಞಾನಂದ –ಎಕ್ಸ್‌ ಚಿತ್ರ
ಆರ್‌. ಪ್ರಜ್ಞಾನಂದ –ಎಕ್ಸ್‌ ಚಿತ್ರ   

ಲಂಡನ್‌: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ ಆರ್‌. ಅವರು ಕೊನೆಯ ಸುತ್ತಿನಲ್ಲಿ ಇಸ್ರೇಲ್‌ನ ಇಲ್ಯಾ ಸ್ಮಿರಿನ್ ಜೊತೆ ಡ್ರಾ ಮಾಡಿಕೊಂಡರು. ಆದರೆ ಇತರ ಇಬ್ಬರು ಆಟಗಾರರಾದ  9 ಸುತ್ತುಗಳಿಂದ ತಲಾ ಏಳು ಪಾಯಿಂಟ್ಸ್ ಗಳಿಸಿದರು. ಹೀಗಾಗಿ ಅವರು ಅಗ್ರಸ್ಥಾನ ಹಂಚಿಕೊಳ್ಳಬೇಕಾಯಿತು.

ಬುಧವಾರ ಸಂಜೆ ನಡೆದ ಅಂತಿಮ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಪ್ರಜ್ಞಾನಂದ 18 ನಡೆಗಳಲ್ಲಿ 2024ರ ಚಾಂಪಿಯನ್‌ ಸ್ಮಿರಿನ್ ಜೊತೆ ಡ್ರಾ ಮಾಡಿಕೊಂಡರು. ಎರಡನೇ ಬೋರ್ಡ್‌ನಲ್ಲಿ ಸರ್ಬಿಯಾದ ವೆಲಿಮಿರ್ ಇವಿಕ್ ಫ್ರಾನ್ಸ್‌ನ ಮ್ಯಾಥ್ಯೂ ಕಾರ್ನೆಟೆ ಅವರನ್ನು ಸೋಲಿಸಿದರು. ಇಂಗ್ಲೆಂಡ್‌ನ ಅಮೀತ್‌ ಕೆ.ಘಸಿ ಅವರು ಸ್ವದೇಶದ ಡೇನಿಯಲ್‌ ಎಚ್‌.ಫೆರ್ನಾಂಡಿಸ್‌ ಅವರನ್ನು ಮಣಿಸಿದರು.

ಈ ಟೂರ್ನಿಯ ನಿಯಮಗಳ ಪ್ರಕಾರ ಆಟಗಾರರು ಸಮಾನ ಪಾಯಿಂಟ್ಸ್ ಗಳಿಸಿದರೆ ಸ್ಥಾನ ನಿರ್ಧಾರಕ್ಕಾಗಿ ಟೈಬ್ರೇಕರ್‌ ಆಡುವುದಿಲ್ಲ. ಬದಲು ಅಗ್ರಸ್ಥಾನ ಹಂಚಿಕೊಂಡು ಬಹುಮಾನ ನಿಧಿಯನ್ನೂ ಹಂಚಿಕೊಳ್ಳಲಾಗುತ್ತದೆ. ಮೊದಲ ಮೂರು ಸ್ಥಾನ ಪಡೆಯುವ ಆಟಗಾರರಿಗೆ ಕ್ರಮವಾಗಿ ₹12 ಲಕ್ಷ, ₹6 ಲಕ್ಷ ಮತ್ತು ₹3.60 ಲಕ್ಷ ನಿಗದಿಪಡಿಸಲಾಗಿತ್ತು.

ADVERTISEMENT

ಕರ್ನಾಟಕದವರಾದ ಗ್ರ್ಯಾಂಡ್‌ಮಾಸ್ಟರ್‌ ಪ್ರಣವ್ ಆನಂದ್ (6.5) ಅವರು ನಂತರದ ಸ್ಥಾನ ಪಡೆದರು. 

ಇದು ಪ್ರಜ್ಞಾನಂದ ಅವರಿಗೆ ಈ ವರ್ಷ ನಾಲ್ಕನೆ ಪ್ರಶಸ್ತಿಯಾಗಿದೆ. ಓಪನ್ ಟೂರ್ನಿಯಲ್ಲಿ ಮೊದಲೆಯದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.