ADVERTISEMENT

ಬ್ಯಾಡ್ಮಿಂಟನ್‌: ಕ್ಯಾರೋಲಿನ್‌ ಮರಿನ್‌ಗೆ ಮಣಿದ ಸೈನಾ

ಏಜೆನ್ಸೀಸ್
Published 19 ಜನವರಿ 2019, 7:08 IST
Last Updated 19 ಜನವರಿ 2019, 7:08 IST
ಸೈನಾ ನೆಹ್ವಾಲ್‌ ಆಟದ ವೈಖರಿ –ಎಎಫ್‌ಪಿ ಚಿತ್ರ
ಸೈನಾ ನೆಹ್ವಾಲ್‌ ಆಟದ ವೈಖರಿ –ಎಎಫ್‌ಪಿ ಚಿತ್ರ   

ಕ್ವಾಲಾಲಂಪುರ: ಇಲ್ಲಿನ ನಡೆದ ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿಸ್ಪೇನ್‌ನ ಕ್ಯಾರೋಲಿನ್‌ ಮರಿನ್‌ ಎದುರು ಭಾರತದ ಆಟಗಾರ್ತಿ ಸೈನಾ ನೆಹ್ವಾಲ್‌ ಸೋಲು ಅನುಭವಿಸಿದ್ದಾರೆ.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಆಟಗಾರ್ತಿ ಸೈನಾ 16–21, 13–21 ರಲ್ಲಿ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಕ್ಯಾರೋಲಿನ್‌ ಮರಿನ್‌ ವಿರುದ್ಧ ಪರಾಭವಗೊಂಡಿದ್ದಾರೆ.

#MalaysiaMasters2019 : Saina Nehwal loses to Carolina Marin 16-21, 13-21 in semi-final#SainaNehwal @NSaina @CarolinaMarinhttps://t.co/3XvLYpjvjZ

ADVERTISEMENT

ಶುಕ್ರವಾರ ನಡೆದಿದ್ದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೈನಾ 21–18, 23–21ರಲ್ಲಿ ನೊಜೊಮಿ ಒಕುಹರಾ ಅವರನ್ನು ಸೋಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.