ADVERTISEMENT

ಏಷ್ಯನ್ ಮ್ಯಾರಥಾನ್: ಮಾನ್‌ ಸಿಂಗ್‌ಗೆ ಚಿನ್ನ

ಪಿಟಿಐ
Published 21 ಜನವರಿ 2024, 15:42 IST
Last Updated 21 ಜನವರಿ 2024, 15:42 IST
ಮಾನ್ ಸಿಂಗ್
ಮಾನ್ ಸಿಂಗ್   

ಹಾಂಕಾಂಗ್: ಮಾನ್ ಸಿಂಗ್ ಅವರು ಭಾನುವಾರ ನಡೆದ ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾದರು.

34 ವರ್ಷದ ಮಾನ್‌ ಸಿಂಗ್‌ ಅವರು 2 ಗಂಟೆ 14 ನಿಮಿಷ 19 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯೂ ಆಗಿದೆ. ಕಳೆದ ವರ್ಷ ಮುಂಬೈ ಮ್ಯಾರಥಾನ್‌ನಲ್ಲಿ 2 ಗಂಟೆ 16 ನಿಮಿಷ 58 ಸೆಕೆಂಡ್‌ನಲ್ಲಿ ಗುರಿ ಮುಟ್ಟಿದ್ದು ಅವರ ಹಿಂದಿನ ಉತ್ತಮ ದಾಖಲೆಯಾಗಿತ್ತು.

ಚೀನಾದ ಹುವಾಂಗ್ ಯೊಂಗ್‌ಜೆಂಗ್ (2ಗಂ. 15ನಿ. 24ಸೆ) ಮತ್ತು ಕಿರ್ಗಿಸ್ತಾನದ ಟಿಯಾಪ್ಕಿನ್ ಇಲ್ಯಾ (2ಗಂ. 18ನಿ. 18ಸೆ) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು. ಭಾರತದ ಮತ್ತೊಬ್ಬ ಸ್ಪರ್ಧಿ ಎ.ಪಿ. ಬೆಳ್ಳಿಯಪ್ಪ ಆರನೇ ಸ್ಥಾನ ಪಡೆದರು.

ADVERTISEMENT

ಗೋಪಿ ತೊನಕಲ್ ಅವರು 2017ರಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಷಿಪ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯನಾಗಿದ್ದಾರೆ.‌

ಹ್ಯಾಂಗ್‌ಝೌ ಏಷ್ಯನ್‌ ಕ್ರೀಡಾಕೂಟದಲ್ಲಿ 8ನೇ ಸ್ಥಾನ ಗಳಿಸಿದ್ದ ಮಾನ್‌ ಸಿಂಗ್‌, ಇಲ್ಲಿ ಚಿನ್ನ ಗೆದ್ದರೂ ಪ್ಯಾರಿಸ್‌ ಒಲಿಂಪಿಕ್ಸ್‌ ಕೋಟಾಕ್ಕೆ (2 ಗಂ. 8ನಿ. 10ಸೆ) ನಿಗದಿಪಡಿಸಿದ್ದ ಗುರಿಯನ್ನು ತಲುಪಲು ವಿಫಲವಾದರು.

ಮಹಿಳೆಯರ ವಿಭಾಗದಲ್ಲಿ ಭಾರತದ ಅಶ್ವಿನಿ ಮದನ್ ಜಾಧವ್ ಮತ್ತು ಜ್ಯೋತಿ ಗಾವಟೆ ಕ್ರಮವಾಗಿ 8ನೇ ಮತ್ತು 11ನೇ ಸ್ಥಾನವನ್ನು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.