ADVERTISEMENT

ಮನು ಭಾಕರ್, ಗುಕೇಶ್ ಸೇರಿ ನಾಲ್ವರಿಗೆ ಖೇಲ್ ರತ್ನ ಪ್ರಶಸ್ತಿ

ಪಿಟಿಐ
Published 2 ಜನವರಿ 2025, 9:43 IST
Last Updated 2 ಜನವರಿ 2025, 9:43 IST
<div class="paragraphs"><p>ಗುಕೇಶ್, ಭಾಕರ್</p></div>

ಗುಕೇಶ್, ಭಾಕರ್

   

–‍ಪಿಟಿಐ ಚಿತ್ರ

ನವದೆಹಲಿ: ಶೂಟರ್‌ ಮನು ಭಾಕರ್, ಚೆಸ್ ವಿಶ್ವ ಚಾಂಪಿಯನ್ ಡಿ. ಗುಕೇಶ್‌, ಭಾರತ ಹಾಕಿ ಪುರುಷರ ತಂಡ ನಾಯಕ ಹಮ್ರನ್‌ಪ್ರೀತ್ ಸಿಂಗ್‌, ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್ ಅವರಿಗೆ ಗುರುವಾರ ಭಾರತ ಸರ್ಕಾರವು ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ.

ADVERTISEMENT

22 ವರ್ಷದ ಮನು ಭಾಕರ್ ಒಲಿಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದು ಇತಿಹಾಸ ಬರೆದಿದ್ದರು. 10 ಮೀಟರ್ ಏರ್ ‍ಪಿಸ್ತೂಲ್ ವೈಯಕ್ತಿಕ ವಿಭಾಗ ಹಾಗೂ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಮನು ಕಂಚು ಜಯಿಸಿದ್ದರು.

ಇದೇ ಒಲಿಂಪಿಕ್ಸ್‌ನಲ್ಲಿ ಹಮ್ರನ್‌ಪ್ರೀತ್ ಸಿಂಗ್‌ ನೇತೃತ್ವದ ಭಾರತದ ಹಾಕಿ ಪುರುಷರ ತಂಡವು ಕಂಚಿನ ಸಾಧನೆ ಮಾಡಿತ್ತು. 18 ವರ್ಷದ ಗುಕೇಶ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದಿದ್ದರು.

ಮಂಡಿ ಕೆಳಗಿನ ಕಾಲು ಕಳೆದುಕೊಂಡಿರುವ ಹೈ ಜಂಪ್ ಪಟು ಪ್ರವೀಣ್, ಪ್ಯಾರಾ ಒಲಿಂಪಿಕ್ಸ್‌ನಲ್ಲಿ T64 ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.

ಜ. 17ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕ್ರೀಡಾ ಇಲಾಖೆ ಗುರುವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.