ADVERTISEMENT

CWG| ಭಾರತಕ್ಕೆ ಮತ್ತೊಂದು ಬೆಳ್ಳಿ: ವೇಟ್‌ಲಿಫ್ಟಿಂಗ್‌ನಲ್ಲಿ ಬಿಂದ್ಯಾರಾಣಿ ಸಾಧನೆ

ಪಿಟಿಐ
Published 31 ಜುಲೈ 2022, 1:47 IST
Last Updated 31 ಜುಲೈ 2022, 1:47 IST
ಬಿಂದ್ಯಾರಾಣಿ ದೇವಿ
ಬಿಂದ್ಯಾರಾಣಿ ದೇವಿ    

ಬರ್ಮಿಂಗ್‌ಹ್ಯಾಮ್‌: ವೇಟ್‌ಲಿಫ್ಟರ್‌ ಬಿಂದ್ಯಾರಾಣಿ ದೇವಿ ಅವರು ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟಿದ್ದಾರೆ. ಈ ಮೂಲಕ ಕೂಟದಲ್ಲಿ ಭಾರತದ ಪದಕದ ಓಟಕ್ಕೆ ಕೊಡುಗೆ ನೀಡಿದ್ದಾರೆ.

ಬಿಂದ್ಯಾರಾಣಿ ಅವರ ಸಾಧನೆಯ ನೆರವಿನೊಂದಿಗೆ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆನಾಲ್ಕನೇ ಪದಕ ಸಿಕ್ಕಂತಾಗಿದೆ.

ಶನಿವಾರ ನಡೆದ ಮಹಿಳೆಯರ ವೇಟ್‌ಲಿಫ್ಟಿಂಗ್‌ನ 55 ಕೆ.ಜಿ. ವಿಭಾಗದಲ್ಲಿ ಅವರು ಒಟ್ಟು 202 ಕೆ.ಜಿ (86 ಕೆ.ಜಿ+ 116 ಕೆ.ಜಿ) ಭಾರ ಎತ್ತುವ ಮೂಲಕ ಎರಡನೇ ಸ್ಥಾನ ಪಡೆದರು. ಸಿಡಬ್ಲ್ಯುಜಿಯಲ್ಲಿ ಇದು ಬಿಂದ್ಯಾರಾಣಿ ಅವರ ಶ್ರೇಷ್ಠ ಸಾಧನೆ ಎಂದೂ ದಾಖಲಾಯಿತು.

ADVERTISEMENT

ನೈಜೀರಿಯಾದ ಆದಿಜತ್ ಅಡೆನಿಕೆ ಒಲರಿನೊಯ್ ಅವರು ಒಟ್ಟು 203 ಕೆಜಿ (92 ಕೆಜಿ + 111 ಕೆಜಿ) ಎತ್ತುವ ಮೂಲಕ ಚಿನ್ನದ ಪದಕವನ್ನು ಗೆದ್ದರು.

ಸ್ಥಳೀಯ ಪ್ರತಿಭೆ ಫ್ರೇರ್ ಮಾರೊ ಅವರು ಒಟ್ಟು 198 ಕೆಜಿ (86 ಕೆಜಿ+109 ಕೆಜಿ) ಎತ್ತುವ ಮೂಲಕ ಮೂರನೇ ಸ್ಥಾನ ಪಡೆದರು.

ಇದಕ್ಕೂ ಮುನ್ನ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಅವರು ಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ ಒದಗಿಸಿದರು. ಸಂಕೇತ್ ಸರ್ಗರ್ ಮತ್ತು ಗುರುರಾಜ ಪೂಜಾರಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.