ADVERTISEMENT

ಏಷ್ಯನ್‌ ಕ್ರೀಡಾಕೂಟ ಸ್ಕ್ವಾಷ್‌: ಭಾರತದ ಪುರುಷರಿಗೆ ಕಂಚು

ಹಾಲಿ ಚಾಂಪಿಯನ್ನರಿಗೆ ಸೆಮಿಫೈನಲ್‌ನಲ್ಲಿ ಸೋಲುಣಿಸಿದ ಹಾಂಕಾಂಗ್‌ ತಂಡ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 15:16 IST
Last Updated 31 ಆಗಸ್ಟ್ 2018, 15:16 IST
ಭಾರತದ ಸೌರವ್ ಘೋಷಾಲ್‌ (ಎಡ) ಹಾಂಕಾಂಗ್‌ನ ಮ್ಯಾಕ್ಸ್ ಲೀ ಎದುರು ಸೆಣಸಿದ ಸಂದರ್ಭ ಪಿಟಿಐ ಚಿತ್ರ
ಭಾರತದ ಸೌರವ್ ಘೋಷಾಲ್‌ (ಎಡ) ಹಾಂಕಾಂಗ್‌ನ ಮ್ಯಾಕ್ಸ್ ಲೀ ಎದುರು ಸೆಣಸಿದ ಸಂದರ್ಭ ಪಿಟಿಐ ಚಿತ್ರ   

ಜಕಾರ್ತ: ಹಾಲಿ ಚಾಂಪಿಯನ್ನರು ಸೆಮಿಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ಶುಕ್ರವಾರ ನಡೆದ ಪುರುಷರ ಸ್ಕ್ವಾಷ್‌ ತಂಡ ವಿಭಾಗದ ನಾಲ್ಕರ ಘಟ್ಟದ ಪಂದ್ಯದಲ್ಲಿ ಹಾಂಕಾಂಗ್‌ ಎದುರು 0–2ರಿಂದ ಸೋತ ಭಾರತ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

ಸೌರವ್ ಘೋಷಾಲ್‌ ಮತ್ತು ಹರಿಂದರ್ ಪಾಲ್ ಸಂಧು, ರಮಿತ್ ಟಂಡನ್ ಮತ್ತು ಮಹೇಶ್ ಮಾಂಗಾಂವ್ಕರ್‌ ಅವರನ್ನು ಒಳಗೊಂಡ ತಂಡಕ್ಕೆ ನಿರೀಕ್ಷಿತ ಸಾಮರ್ಥ್ಯ ತೋರಲು ಆಗಲಿಲ್ಲ. ಕಳೆದ ಬಾರಿ ಕಂಚು ಗೆದ್ದಿದ್ದ ಹಾಂಕಾಂಗ್ ತಂಡದ ಆಟಗಾರರು ಅಮೋಘ ಸಾಮರ್ಥ್ಯ ತೋರಿ ಫೈನಲ್‌ಗೆ ಪ್ರವೇಶಿಸಿದರು.

ಸೌರವ್ ಘೋಷಾಲ್‌ ಅವರು ಮ್ಯಾಕ್ಸ್ ಲೀ ಎದುರಿನ ಪಂದ್ಯದಲ್ಲಿ 0–3 (7–11, 9–11, 11–13)ರಿಂದ ಸೋತು ಆರಂಭದಲ್ಲೇ ನಿರಾಸೆ ಕಂಡರು. ನಂತರ ಹರಿಂದರ್ ಪಾಲ್‌ 1–3 (9–11, 11–9, 9–11, 3–11) ರಿಂದ ಲೀ ಆವ್‌ ಎದುರು ಸೋತರು. ಹೀಗಾಗಿ ತಂಡ ಒತ್ತಡಕ್ಕೆ ಒಳಗಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.