ADVERTISEMENT

ರಾಷ್ಟ್ರೀಯ ಸೀನಿಯರ್ ಬ್ಯಾಸ್ಕೆಟ್‌ಬಾಲ್: ಅರವಿಂದ್ ಚುರುಕಿನ ಆಟಕ್ಕೆ ಒಲಿದ ಜಯ

ಚೆನ್ನೈನಲ್ಲಿ ರಾಷ್ಟ್ರೀಯ ಸೀನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 16:52 IST
Last Updated 4 ಏಪ್ರಿಲ್ 2022, 16:52 IST
ಚೆನ್ನೈನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೀನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಕರ್ನಾಟಕ ಮತ್ತು ಉತ್ತರಪ್ರದೇಶ ತಂಡಗಳ ಹಣಾಹಣಿ  
ಚೆನ್ನೈನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೀನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಕರ್ನಾಟಕ ಮತ್ತು ಉತ್ತರಪ್ರದೇಶ ತಂಡಗಳ ಹಣಾಹಣಿ     

ಚೆನ್ನೈ: ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ 71ನೇ ರಾಷ್ಟ್ರೀಯ ಸೀನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಪುರುಷರ ವಿಬಾಗದಲ್ಲಿ ಬಿ ಗುಂಪಿನಲ್ಲಿ ಎರಡನೇ ಜಯ ದಾಖಲಿಸಿತು. ಆದರೆ, ಕರ್ನಾಟಕ ಮಹಿಳೆಯರ ತಂಡವು ಸೋತಿತು.

ಸೋಮವಾರ ನೆಹರು ಕ್ರೀಡಾಂಗಣದ ಒಳಾಂಗಣದಲ್ಲಿ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಕರ್ನಾಟಕ ತಂಡವು 86–56 ರಿಂದ ಉತ್ತರ ಪ್ರದೇಶದ ವಿರುದ್ಧ ಗೆದ್ದು ಎರಡನೇ ಸುತ್ತಿಗೆ ಸಾಗಿತು. ಕರ್ನಾಟಕ ತಂಡದ ಅರವಿಂದ್ (20), ಅನಿಲ್ ಕುಮಾರ್ (18), ಅಭಿಷೇಕ್ ಗೌಡ (14), ಪ್ರತ್ಯಾಂಶು ತೋಮರ್ (11) ಮಿಂಚಿದರು. ಉತ್ತರ ಪ್ರದೇಶ ತಂಡದ ಹರ್ಷ ಡಾಗರ್ 13 ಮತ್ತು ವಿಶಾಲ್ ಎಂ ಕುಮಾರ್ 10 ಅಂಕಗಳನ್ನು ಗಳಿಸಿದರು.

ಕರ್ನಾಟಕ ತಂಡವು ಮಂಗಳವಾರ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಎದುರಿಸಲಿದೆ.

ADVERTISEMENT

ಇನ್ನುಳಿದ ಪಂದ್ಯಗಳಲ್ಲಿ ಪಂಜಾಬ್ ತಂಡವು 90 –50ರಿಂದ ಕೇರಳ ವಿರುದ್ಧ; ತಮಿಳುನಾಡು 90–50ರಿಂದ ಮಿಜೋರಾಂ ವಿರುದ್ಧ; ಇಂಡಿಯನ್ ರೇಲ್ವೆಸ್ 81–70ರಿಂದ ಹರಿಯಾಣ ಎದುರು; ಸರ್ವಿಸಸ್ 100–73ರಿಂದ ರಾಜಸ್ಥಾನ ಎದುರು ಗೆಲುವು ಸಾಧಿಸಿದವು.

ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ತಂಡವು ಎರಡನೇ ಪಂದ್ಯದಲ್ಲಿ 72–79ರಿಂದ ಪಂಜಾಬ್ ವಿರುದ್ಧ ಸೋತಿತು. ಪಂಜಾಬ್ ತಂಡದ ಕಾವ್ಯಾ ಸಿಂಘಾಲ 21, ಕನಿಷ್ಕಾ ಧೀರ್ 25 ಮತ್ತು ರಿತಿಕಾ 13 ಅಂಕಗಳನ್ನು ಗಳಿಸಿದರು. ಕರ್ನಾಟಕದ ವರ್ಷಾ ನಂದಿನಿ 32 ಮತ್ತು ಲೋಪಮುದ್ರಾ 19 ಅಂಕಗಳನ್ನು ಗಳಿಸಿದರು.

ಕೇರಳ ತಂಡವು 56–34ರಿಂದ ಮಧ್ಯಪ್ರದೇಶ ಎದುರು ಜಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.