ADVERTISEMENT

ಪಾಕ್ ಮೇಲೆ ಗೆದ್ದ ಭಾರತಕ್ಕೆ ಕಂಚು

ಪೆನಾಲ್ಟಿ ಶೂಟೌಟ್‌ವರೆಗೆ ಬೆಳೆದ ಪಂದ್ಯ

ಪಿಟಿಐ
Published 4 ನವೆಂಬರ್ 2023, 16:12 IST
Last Updated 4 ನವೆಂಬರ್ 2023, 16:12 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಜೊಹೋರ್ ಬಹ್ರು (ಮಲೇಷ್ಯಾ),: ಗೋಲ್‌ಕೀಪರ್‌ ಎಚ್‌.ಎಸ್‌.ಮೋಹಿತ್ ಅವರು ಪೆನಾಲ್ಟಿ ಶೂಟೌಟ್‌ನಲ್ಲಿ ನಿರ್ಣಾಯಕ ತಡೆ ಪ್ರದರ್ಶಿಸಿ ಭಾರತ ಜೂನಿಯರ್ ತಂಡ 6–5 ಗೋಲುಗಳಿಂದ ಬದ್ಧ ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸುವಲ್ಲಿ ನೆರವಾದರು. ಭಾರತ ಈ ಗೆಲುವಿನೊಡನೆ ಕಂಚಿನ ಪದಕ ಪಡೆಯಿತು.

ನಿಗದಿ ಅವಧಿಯ ಆಟದಲ್ಲಿ ಸ್ಕೋರ್ 3–3 ಗೋಲುಗಳಿಂದ ಸಮನಾಗಿತ್ತು. ಅರುಣ್ ಸಹಾನಿ (11ನೇ ನಿಮಿಷ), ಪೂವಣ್ಣ ಸಿ.ಬಿ. (42ನೇ) ಮತ್ತು ನಾಯಕ ಉತ್ತಮ್‌ ಸಿಂಗ್ (52ನೇ) ಭಾರತದ ಪರ ಗೋಲು ಗಳಿಸಿದರು. ಪಾಕ್ ಪರ ಸುಫ್ಯಾನ್ ಖಾನ್ (33ನೇ), ಅಬ್ದುಲ್ ಖಯ್ಯೂಮ್ (50ನೇ) ಮತ್ತು ನಾಯಕ ಶಾಹಿದ್ ಹನ್ನನ್ (57ನೇ) ಚೆಂಡನ್ನು ಗುರಿಮುಟ್ಟಿಸಿದರು.

ADVERTISEMENT

ಪೆನಾಲ್ಟಿ ಶೂಟೌಟ್‌ ‘ಸಡನ್‌ ಡೆತ್‌’ಗೂ ಬೆಳೆಯಿತು. ಈ ವೇಳೆ ಮೋಹಿತ್ ಅವರು ಹನ್ನನ್ ಯತ್ನವನ್ನು ಪರಿಪೂರ್ಣವಾಗಿ ತಡೆದು ಗೆಲುವಿಗೆ ಕಾರಣಕರ್ತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.