ADVERTISEMENT

ನಾಮಧಾರಿ ಕಪ್‌ ಹಾಕಿ ಟೂರ್ನಿ: ಡಿವೈಇಎಸ್‌ ಬಿ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 14:23 IST
Last Updated 9 ಡಿಸೆಂಬರ್ 2025, 14:23 IST
   

ಬೆಂಗಳೂರು: ಆರ್‌. ಲಿಥು (19ನೇ ನಿ., 56ನೇ ನಿ. ಹಾಗೂ 60ನೇ ನಿ.) ಅವರ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ಡಿವೈಇಎಸ್‌ ಬಿ ತಂಡವು ನಾಮಧಾರಿ ಕಪ್‌ ಹಾಕಿ ಟೂರ್ನಿಯ ಪಂದ್ಯದಲ್ಲಿ ಸೋಮವಾರ 6–1ರಿಂದ ಸಾಯ್‌ ಎಸ್‌ಟಿಸಿ ಬಿ ತಂಡವನ್ನು ಸುಲಭವಾಗಿ ಮಣಿಸಿತು.

ಡಿವೈಇಎಸ್‌ ಬಿ ತಂಡದ ಅಖಿಲ್‌ ಎಂ. (7ನೇ ನಿ.), ಶ್ರೀನಿವಾಸ್‌ ತಳವಾರ್‌ (50ನೇ ನಿ.) ಹಾಗೂ ಪ್ರೇಮ್‌ಕುಮಾರ್‌ 57ನೇ ನಿ.) ಅವರು ತಲಾ ಒಂದು ಗೋಲು ಗಳಿಸಿದರು. ನಯೀಮುದ್ದೀನ್‌ (24ನೇ ನಿ.) ಅವರು ಸಾಯ್‌ ಎಸ್‌ಟಿಸಿ ಬಿ ತಂಡದ ಪರ ಏಕೈಕ ಗೋಲು ಹೊಡೆದರು.

ಇನ್ನೊಂದು ಪಂದ್ಯದಲ್ಲಿ ಸಂಘಟಿತ ಆಟವಾಡಿದ ಕೆನರಾ ಬ್ಯಾಂಕ್‌ ತಂಡವು 5–2 ಗೋಲುಗಳಿಂದ ಪೋಸ್ಟಲ್‌ ತಂಡದ ವಿರುದ್ಧ ಗೆಲುವು ಸಾಧಿಸಿತು. ಕೆನರಾ ಬ್ಯಾಂಕ್‌ ತಂಡದ ಅಭಿಷೇಕ್‌ (6ನೇ ನಿ.), ಬಿಪಿನ್‌ ಬಿ.ಆರ್. (24ನೇ ಹಾಗೂ 36ನೇ ನಿ.), ನಿತೇಶ್‌ ಶರ್ಮಾ (40ನೇ ನಿ.) ಹಾಗೂ ರತನ್‌ ಎಂ. (41ನೇ ನಿ.) ತಲಾ ಒಂದು ಗೋಲು ಹೊಡೆದರು. ಪೋಸ್ಟಲ್‌ ತಂಡದ ಪರ ಶ್ರೀರಾಮ (19ನೇ ನಿ.) ಹಾಗೂ ಚೇತನ್‌ ಚಿನ್ನಪ್ಪ (52ನೇ ನಿ.) ತಲಾ ಒಂದು ಗೋಲು ಹೊಡೆದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.