ADVERTISEMENT

ನಾಮಧಾರಿ ಕಪ್‌ ಹಾಕಿ: ಪವನ್‌ ಹ್ಯಾಟ್ರಿಕ್‌ ಗೋಲು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 19:09 IST
Last Updated 11 ಡಿಸೆಂಬರ್ 2025, 19:09 IST
   

ಬೆಂಗಳೂರು: ಪವನ್‌ ಡಿ.ಆರ್‌. ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತಿ ಕೇಂದ್ರ (ಸಾಯ್‌ ಎಸ್‌ಟಿಸಿ) ‘ಬಿ’ ತಂಡವು ನಾಮಧಾರಿ ಕಪ್‌ ಟೂರ್ನಿಯ ಪಂದ್ಯದಲ್ಲಿ  5–0ಯಿಂದ ಪೋಸ್ಟಲ್‌ ತಂಡವನ್ನು ಮಣಿಸಿತು.

ಶಾಂತಿನಗರದ ಕೆಎಸ್ಎಚ್‌ಎ ಕ್ರೀಡಾಂಗಣದಲ್ಲಿ ಕೂಟದ ಆರನೇ ದಿನವಾದ ಗುರುವಾರ ನಡೆದ ಪಂದ್ಯದಲ್ಲಿ ಸಾಯ್‌ ಎಸ್‌ಟಿಸಿ ಪರ ಪವನ್‌ (18ನೇ, 44ನೇ ಮತ್ತು 48ನೇ) ಮೂರು ಗೋಲು ಗಳಿಸಿದರೆ, ಬೋಪಣ್ಣ ಜಿ.ಎನ್. (2ನೇ) ಮತ್ತು ಹೃತಿಕ್ ಅಯ್ಯಪ್ಪ ಕೆ.ಡಿ. (45ನೇ) ತಲಾ ಒಂದು ಗೋಲು ಬಾರಿಸಿದರು.

ಮತ್ತೊಂದು ಪಂದ್ಯದಲ್ಲಿ ಕೆನರಾ ಬ್ಯಾಂಕ್‌ ತಂಡವು 1–1 ಗೋಲಿನೊಂದಿಗೆ ಡಿವೈಇಎಸ್‌ ಎ ತಂಡದೊಂದಿಗೆ ಡ್ರಾ ಸಾಧಿಸಿತು. ಡಿವೈಇಎಸ್‌ ಪರ ಶಿವಕುಮಾರಯ್ಯ ವಿ ಪೂಜಾರ್‌ (44ನೇ) ಮತ್ತು ಕೆನರಾ ಬ್ಯಾಂಕ್‌ ತಂಡದ ನಿತೇಶ್‌ ಶರ್ಮಾ (48ನೇ) ಗೋಲು ಗಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.