ADVERTISEMENT

ರಾಷ್ಟ್ರೀಯ ಚೆಸ್‌ ಟೂರ್ನಿ ಸೆ.1ರಿಂದ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 20:01 IST
Last Updated 26 ಆಗಸ್ಟ್ 2024, 20:01 IST
ಚೆಸ್‌ (ಸಾಂದರ್ಭಿಕ ಚಿತ್ರ)
ಚೆಸ್‌ (ಸಾಂದರ್ಭಿಕ ಚಿತ್ರ)   

ಮೈಸೂರು: ಏಳು ವರ್ಷದೊಳಗಿ ನವರ 37ನೇ ರಾಷ್ಟ್ರೀಯ ಚೆಸ್‌ ಚಾಂಪಿಯನ್‌ಷಿಪ್‌ ಸೆ.1ರಿಂದ 5ರ ವರೆಗೆ ಇಲ್ಲಿನ ವಿಜಯನಗರದ ಸಂಭ್ರಮ ಕಲ್ಯಾಣಮಂಟಪದಲ್ಲಿ ನಡೆಯಲಿದೆ.

‘ಅಖಿಲ ಭಾರತ ಚೆಸ್ ಸಂಸ್ಥೆ ಹಾಗೂ ಎಂ.ಎಂ.ಚೆಸ್ ಡೆವಲಪ್‌ಮೆಂಟ್ ಟ್ರಸ್ಟ್, ಮೈಸೂರು ಚೆಸ್ ಸೆಂಟರ್, ತುಮಕೂರು ಚೆಸ್ ಅಕಾಡೆಮಿ ಮತ್ತು ಮಂಡ್ಯ ಚೆಸ್ ಅಕಾಡೆಮಿ ಸಹಯೋಗದಲ್ಲಿ ಟೂರ್ನಿ ನಡೆಯಲಿದೆ.

ದೇಶದ ವಿವಿಧ ಭಾಗಗ ಳಿಂದ 400ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ’ ಎಂದು ರಾಜ್ಯ ಚೆಸ್ ಸಂಸ್ಥೆ ಉಪಾಧ್ಯಕ್ಷ ಟಿ.ಎನ್.ಮಧುಕರ್ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

‘ಟೂರ್ನಿಯಲ್ಲಿ 9 ಸುತ್ತುಗಳಿದ್ದು ನಡೆಯಲಿದ್ದು, ವಿಜೇತರು ಒಟ್ಟು ₹5 ಲಕ್ಷ ಮೊತ್ತದ ಬಹುಮಾನ ಪಡೆಯಲಿದ್ದಾರೆ. ಕಾಮನ್‌ವೆಲ್ತ್‌ ಚೆಸ್‌, ಏಷ್ಯನ್‌ ಹಾಗೂ ವಿಶ್ವ ಮಕ್ಕಳ ಚೆಸ್‌ ಸ್ಪರ್ಧೆಗೆ ಇದೇ ವೇಳೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.