
ಪ್ರಜಾವಾಣಿ ವಾರ್ತೆ
ಬೆಂಗಳೂರು: ಕರ್ನಾಟಕ ತಂಡವು ಭೋಪಾಲದಲ್ಲಿ ಶುಕ್ರವಾರ ಮುಕ್ತಾಯಗೊಂಡ 14ನೇ ರಾಷ್ಟ್ರೀಯ ಡ್ರ್ಯಾಗನ್ ಬೋಟ್ ಚಾಂಪಿಯನ್‌ಷಿಪ್‌ನಲ್ಲಿ 3 ಚಿನ್ನ ಸೇರಿ ಒಟ್ಟು 11 ಪದಕಗಳನ್ನು ಗೆದ್ದುಕೊಂಡಿತು.
17 ರಾಜ್ಯಗಳ 1,150 ಆಟಗಾರರು ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದರು. ಒಟ್ಟು 106 ವಿಭಾಗಗಳಲ್ಲಿ ರೇಸ್‌ಗಳು ನಡೆದವು.
ಕರ್ನಾಟಕ ತಂಡವು 2 ಸಾವಿರ ಮೀ. ರೇಸ್‌ನಲ್ಲಿ ಮೂರು ಬೆಳ್ಳಿ ಗೆದ್ದರೆ, 500 ಮೀ. ಸ್ಪರ್ಧೆಯಲ್ಲಿ 2 ಚಿನ್ನ, ತಲಾ ಒಂದು ಬೆಳ್ಳಿ ಹಾಗೂ ಕಂಚು ಜಯಿಸಿತು. 200 ಮೀ. ರೇಸ್‌ನಲ್ಲಿ ಒಂದು ಚಿನ್ನ ಹಾಗೂ ಮೂರು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿತು.
ಮಹೇಶ್ ಎಂ.ಎಸ್., ವಿಜಯ್‌ಕುಮಾರ್ ಹಾಗೂ ವೀರಮುತ್ತು ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ತಂಡ ಕಣಕ್ಕಿಳಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.