ADVERTISEMENT

National Games 2025: ಧೀನಿಧಿ ದೇಸಿಂಗು ದಾಖಲೆ, ಶ್ರೀಹರಿ ಮಿಂಚು

ಚಿನ್ನದ ಬೇಟೆ ಮುಂದುವರಿಸಿದ ಕರ್ನಾಟಕದ ಈಜುಪಟುಗಳು: ರಾಜ್ಯ ತಂಡಕ್ಕೆ ಮಿಶ್ರ ರಿಲೆ ಕಿರೀಟ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 16:45 IST
Last Updated 3 ಫೆಬ್ರುವರಿ 2025, 16:45 IST
ಉತ್ತರಾಖಂಡದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ಈಜು ವಿಭಾಗದಲ್ಲಿ 4X100 ಮೀಟರ್ಸ್‌ ಮಿಶ್ರ ರಿಲೆಯಲ್ಲಿ ಚಿನ್ನ ಗೆದ್ದ ಕರ್ನಾಟಕ ತಂಡ (ಎಡದಿಂದ), ಆಕಾಶ್ ಮಣಿ, ಧೀನಿಧಿ ದೇಸಿಂಗು, ಶ್ರೀಹರಿ ನಟರಾಜ್ ಹಾಗೂ ನೀನಾ ವೆಂಕಟೇಶ್   
ಉತ್ತರಾಖಂಡದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ಈಜು ವಿಭಾಗದಲ್ಲಿ 4X100 ಮೀಟರ್ಸ್‌ ಮಿಶ್ರ ರಿಲೆಯಲ್ಲಿ ಚಿನ್ನ ಗೆದ್ದ ಕರ್ನಾಟಕ ತಂಡ (ಎಡದಿಂದ), ಆಕಾಶ್ ಮಣಿ, ಧೀನಿಧಿ ದೇಸಿಂಗು, ಶ್ರೀಹರಿ ನಟರಾಜ್ ಹಾಗೂ ನೀನಾ ವೆಂಕಟೇಶ್      

ಬೆಂಗಳೂರು: ಈಜು ಕ್ರೀಡೆಯ ಶಕ್ತಿಕೇಂದ್ರ ಕರ್ನಾಟಕದ ಸ್ಪರ್ಧಿಗಳು ಉತ್ತರಾಖಂಡದ ಹಲಧ್ವನಿಯಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸೋಮವಾರ ಮತ್ತೆ ಐದು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಆ ಮೂಲಕ ತಮ್ಮ ಪಾರಮ್ಯವನ್ನು ಮುಂದುವರಿಸಿದ್ದಾರೆ.

14 ವರ್ಷದ ಒಲಿಂಪಿಯನ್ ಧಿನಿಧಿ ದೇಸಿಂಗು ಅವರು ನೂತನ ಕೂಟ ದಾಖಲೆಯೊಂದಿಗೆ ಪದಕವನ್ನು ಕೊರಳಿಗೇರಿಸಿಕೊಂಡರು. ಮಹಿಳೆಯರ  400 ಮೀಟರ್ಸ್ ಫ್ರೀಸ್ಟೈಲ್‌ ವಿಭಾಗದಲ್ಲಿ ಧೀನಿಧಿ ದೇಸಿಂಗು  4ನಿಮಿಷ, 24.60ಸೆಕೆಂಡುಗಳಲ್ಲಿ ಗುರಿ ಮುಟ್ಟಿ ನೂತನ ದಾಖಲೆ ಬರೆದರು. ಅವರು ಎರಡು ವರ್ಷಗಳ ಹಿಂದೆ ದೆಹಲಿ ಭವ್ಯಾ ಸಚದೇವ ಅವರ ದಾಖಲೆಯನ್ನು ಮೀರಿ ನಿಂತರು. 

ಪುರುಷರ ವಿಭಾಗದಲ್ಲಿ ಒಲಿಂಪಿಯನ್ ಶ್ರೀಹರಿ ನಟರಾಜ್ ಚಿನ್ನದ ಪದಕ ಗೆದ್ದರು. ಅವರು 50 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಮೊದಲಿಗರಾದರು. ರಾಜ್ಯದವರೇ ಆದ ಆಕಾಶ್ ಮಣಿ ಇದೇ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದರು. 200 ಮೀ ಮೆಡ್ಲೆಯಲ್ಲಿ ಕರ್ನಾಟಕದ ಶಾನ್ ಗಂಗೂಲಿ ಅವರು ಚಿನ್ನ ಗೆದ್ದರು. 

ADVERTISEMENT

4X100 ಮೀ ಮಿಶ್ರ ಫ್ರೀಸ್ಟೈಲ್ ರಿಲೆ ವಿಭಾಗದಲ್ಲಿ ಕರ್ನಾಟಕದ ತಂಡವು ಚಿನ್ನದ ಬೇಟೆಯಾಡಿತು. ಆಕಾಶ್ ಮಣಿ, ನೀನಾ ವೆಂಕಟೇಶ್, ಧೀನಿಧಿ ದೇಸಿಂಗು ಹಾಗೂ  ಶ್ರೀಹರಿ ನಟರಾಜ್ ಅವರಿದ್ದ ತಂಡವು 3ನಿಮಿಷ, 41.03ಸೆಕೆಂಡುಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆಯಿತು. 

ಫಲಿತಾಂಶಗಳು: ಪುರುಷರು: 50 ಮೀ ಬ್ಯಾಕ್‌ಸ್ಟ್ರೋಕ್: ಶ್ರೀಹರಿ ನಟರಾಜ್ (ಕರ್ನಾಟಕ; 26.09ಸೆಕೆಂಡು)–1, ಆಕಾಶ್ ಮಣಿ (ಕರ್ನಾಟಕ; 26.42ಸೆ)–2, ರಿಷಭ್ ದಾಸ್ (ಮಹಾರಾಷ್ಟ್ರ)–3. 

800 ಮೀ ಫ್ರೀಸ್ಟೈಲ್: ಖುಶಾಗ್ರ ರಾವತ್ (ದೆಹಲಿ; 8ನಿ,12.89ಸೆ)–1, ಆರ್ಯನ್ ನೆಹ್ರಾ(ಗುಜರಾತ್‌; 8ನಿ,23.62ಸೆ)–2, ಅನೀಶ್ ಎಸ್ ಗೌಡ (ಕರ್ನಾಟಕ; 8ನಿ,24.39ಸೆ)–3

200 ಮೀ ಮೆಡ್ಲೆ: ಶಾನ್ ಗಂಗೂಲಿ (ಕರ್ನಾಟಕ; 2ನಿ,6.61ಸೆ)–1, ಸಜನ್ ಪ್ರಕಾಶ್ (ಕೇರಳ)–2, ಆರ್ಯನ್ ನೆಹ್ರಾ (ಗುಜರಾತ್)–3. 

ಮಹಿಳೆಯರು: 50 ಮೀ ಬ್ಯಾಕ್‌ಸ್ಟ್ರೋಕ್: ವಿಹಿತಾ ನಯನಾ (ಕರ್ನಾಟಕ; 31.46ಸೆ)–1, ಸೌಬರ್ತಿ ಮಂಡಲ್ (ಬಂಗಾಳ)–2, ಋತುತಾ ರಾಜದನ್ಯಾ (ಮಹಾರಾಷ್ಟ್ರ)–3. 

400 ಮೀ ಫ್ರೀಸ್ಟೈಲ್: ಧೀನಿಧಿ ದೇಸಿಂಗು (ಕರ್ನಾಟಕ; 4ನಿ,24.60ಸೆ, ನೂತನ ದಾಖಲೆ. ಹಳೆಯದು: 4ನಿ,27.93ಸೆ, ಭವ್ಯಾ ಸಚದೇವ, 2023ರಲ್ಲಿ)–1, ಭವ್ಯಾ ಸಚದೇವ (ದೆಹಲಿ)–2, ಅದಿತಿ ಸತೀಶ್ ಹೆಗಡೆ (ಮಹಾರಾಷ್ಟ್ರ)–3. 

200 ಮೀ ಮೆಡ್ಲೆ: ಸಾನ್ವಿ ದೇಶ್ವಾಲ್ (ಮಹಾರಾಷ್ಟ್ರ;  2ನಿ,24.90ಸೆ)–1, ಶ್ರೀನೀತಿ ನಟೇಶನ್ (ತಮಿಳುನಾಡು)–2, ಭೂಮಿ ಗುಪ್ತಾ –3. 

4X100 ಮೀ ಮಿಶ್ರ ಫ್ರೀಸ್ಟೈಲ್: ಕರ್ನಾಟಕ (ಆಕಾಶ್ ಮಣಿ, ನೀನಾ ವೆಂಕಟೇಶ್, ಧೀನಿಧಿ ದೇಸಿಂಗು, ಶ್ರೀಹರಿ ನಟರಾಜ್; 3ನಿ, 41.03ಸೆ)–1, ಮಹಾರಾಷ್ಟ್ರ –2, ತಮಿಳುನಾಡು–3.

ಡೈವಿಂಗ್ 1 ಮೀ ಸ್ಪ್ರಿಂಗ್‌ಬೋರ್ಡ್‌: ಪಲಕ್ ಶರ್ಮಾ (ಮಧ್ಯಪ್ರದೇಶ; 165.20 ಪಾಯಿಂಟ್ಸ್)–1, ಕೆ. ಮೃಣಾಲಿನಿ (ತಮಿಳುನಾಡು)–2, ಕ್ಷಮಾ ಬಂಗೇರಾ (ಮಹಾರಾಷ್ಟ್ರ)–3. 

ವಾಟರ್‌ಪೋಲೊ: ಸೆಮಿಫೈನಲ್– ಪುರುಷರು: ಮಹಾರಾಷ್ಟ್ರ ತಂಡವು 20–5ರಿಂದ ಪಶ್ಚಿಮ ಬಂಗಾಳದ ಎದುರು; ಎಸ್‌ಎಸ್‌ಸಿಬಿ ತಂಡವು ಕೇರಳ ಎದುರು 14–11ರಿಂದ ಜಯಿಸಿತು. ಮಹಿಳೆಯರು: ಕೇರಳ ತಂಡವು 15–9ರಿಂದ ಪಶ್ಚಿಮ ಬಂಗಾಳ ಎದುರು; ಮಹಾರಾಷ್ಟ್ರ ತಂಡವು 15–12ರಿಂದ ಕರ್ನಾಟಕದ ಎದುರು (ಪೆನಾಲ್ಟಿ ಶೂಟೌಟ್‌ನಲ್ಲಿ) ಜಯಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.