ADVERTISEMENT

ಪ್ಯಾರಾಲಿಂಪಿಕ್ಸ್ ಅರ್ಹತೆ ಗಿಟ್ಟಿಸಿದ ನವದೀಪ್‌, ಅರವಿಂದ್‌

ಪಿಟಿಐ
Published 13 ಫೆಬ್ರುವರಿ 2021, 16:15 IST
Last Updated 13 ಫೆಬ್ರುವರಿ 2021, 16:15 IST

ದುಬೈ : ಭಾರತದ ಅಥ್ಲೀಟ್‌ಗಳಾದ ನವದೀಪ್‌ ಹಾಗೂ ಅರವಿಂದ್ ಅವರು ಮುಂಬರುವ ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದರು. ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾನ್ ಪ್ರಿಯಲ್ಲಿ ಕ್ರಮವಾಗಿ ಜಾವೆಲಿನ್ ಥ್ರೊ ಹಾಗೂ ಶಾಟ್‌ಪಟ್‌ ಸ್ಪರ್ಧೆಗಳಲ್ಲಿ ಅವರು ಈ ಸಾಧನೆ ಮಾಡಿದರು. ಟೂರ್ನಿಯ ಮೂರನೇ ದಿನವಾದ ಶನಿವಾರ ಭಾರತ ಗೆದ್ದ ಚಿನ್ನದ ಪದಕಗಳ ಸಂಖ್ಯೆ ಒಂಬತ್ತಕ್ಕೆ ತಲುಪಿತು.

ಟೂರ್ನಿಯಲ್ಲಿ ಭಾರತ ಇದುವರೆಗೆ 17 ಪದಕಗಳನ್ನು ಗೆದ್ದುಕೊಂಡಿದೆ. ಈ ಪಟ್ಟಿಗೆ ಶನಿವಾರ ಸೇರಿದ್ದು ನಾಲ್ಕು ಚಿನ್ನದ ಪದಕಗಳು.

ಅಮೋಘ ಸಾಮರ್ಥ್ಯ ತೋರಿದ ಜಾವೆಲಿನ್ ಥ್ರೊ ಸ್ಪರ್ಧಿಗಳಾದ ಹಾಲಿ ವಿಶ್ವ ಚಾಂಪಿಯನ್‌ ಸಂದೀಪ್ ಚೌಧರಿ (ಎಫ್‌ 44 ವಿಭಾಗ), ಅಜೀತ್ ಸಿಂಗ್‌ (ಎಫ್‌ 46) ಹಾಗೂ ನವದೀಪ್‌ (ಎಫ್‌41) ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು. ಇನ್ನೊಂದು ಚಿನ್ನದ ಪದಕವನ್ನು ಎಫ್‌64 ವಿಭಾಗದ 200 ಮೀ. ಓಟದಲ್ಲಿ ಪ್ರಣವ್ ಪ್ರಶಾಂತ್ ದೇಸಾಯಿ ಗೆದ್ದುಕೊಂಡರು.

ADVERTISEMENT

ಸುಂದರ್ ಸಿಂಗ್ ಗುರ್ಜರ್‌ (ಎಫ್‌46) ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಎಫ್‌35/36 ವಿಭಾಗದ ಶಾಟ್‌ಪಟ್‌ನಲ್ಲಿ ಅರವಿಂದ್‌ ಐದನೇ ಸ್ಥಾನ ಗಳಿಸಿದರೂ, ಪ್ಯಾರಾಲಿಂಪಿಕ್ಸ್ ಅರ್ಹತೆಗೆ ನಿಗದಿಪಡಿಸಿದ್ದ ಗುರಿ ದಾಟಿದರು. ಅವರು 14.05 ಮೀ. ಸಾಧನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.