ADVERTISEMENT

Asian Games | ಜಾವೆಲಿನ್ ಡಬಲ್ ಧಮಾಕಾ: ನೀರಜ್‌ಗೆ ಚಿನ್ನ, ಕಿಶೋರ್‌ಗೆ ಬೆಳ್ಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2023, 12:44 IST
Last Updated 4 ಅಕ್ಟೋಬರ್ 2023, 12:44 IST
<div class="paragraphs"><p>ನೀರಜ್ ಚೋಪ್ರಾ</p></div>

ನೀರಜ್ ಚೋಪ್ರಾ

   

(ರಾಯಿಟರ್ಸ್ ಚಿತ್ರ)

ಹಾಂಗ್‌ಝೌ: ಏಷ್ಯನ್ ಗೇಮ್ಸ್ 2023ರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನ ಮತ್ತು ಕಿಶೋರ್ ಜೇನಾ ಬೆಳ್ಳಿ ಪದಕ ಜಯಿಸಿದ್ದಾರೆ.

ADVERTISEMENT

ಈ ಮೂಲಕ ಜಾವೆಲಿನ್ ಸ್ಪರ್ಧೆಯಲ್ಲಿ ಭಾರತೀಯ ಸ್ಪರ್ಧಿಗಳು ಅಮೋಘ ಸಾಧನೆ ಮಾಡಿದ್ದಾರೆ.

ಜಾವೆಲಿನ್ ವಿಭಾಗದಲ್ಲಿ ಚಿನ್ನ ತಮ್ಮ ಬಳಿಯೇ ಉಳಿಸಿರುವ ನೀರಜ್, 88.88 ಮೀಟರ್ ದೂರ ಜಾವೆಲಿನ್ ಎಸೆದು ಗಮನ ಸೆಳೆದಿದ್ದಾರೆ.

ನೀರಜ್‌ಗೆ ತಕ್ಕ ಪೈಪೋಟಿ ಒಡ್ಡಿದ ಭಾರತೀಯವರೇ ಆದ ಜೇನಾ 87.54 ಮೀಟರ್ ದೂರ ಜಾವೆಲಿನ್ ಎಸೆದು ಬೆಳ್ಳಿ ಪದಕಕ್ಕೆ ಅರ್ಹರಾದರು.

ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವೀರ ನೀರಜ್, 2018ರ ಏಷ್ಯನ್ ಕ್ರೀಡಾಕೂಟದಲ್ಲೂ ಚಿನ್ನ ಜಯಿಸಿದ್ದರು.

ನೀರಜ್‌ ಚೋಪ್ರಾ ಸಾಧನೆ

  • ಏಷ್ಯನ್‌ ಗೇಮ್ಸ್‌ (2023);ಚಿನ್ನ

  • ಡೈಮಂಡ್‌ ಲೀಗ್‌ (2023);ರನ್ನರ್‌ ಅಪ್

  • ವಿಶ್ವ ಚಾಂಪಿಯನ್‌ಷಿಪ್‌ (2023);ಚಿನ್ನ

  • ಒಲಿಂಪಿಕ್ಸ್‌ (2020);ಚಿನ್ನ

  • ಡೈಮಂಡ್‌ ಲೀಗ್‌ (2022);ಚಾಂಪಿಯನ್‌

  • ವಿಶ್ವ ಚಾಂಪಿಯನ್‌ಷಿಪ್‌ (2022);ಬೆಳ್ಳಿ

  • ಏಷ್ಯನ್‌ ಗೇಮ್ಸ್‌ (2018);ಚಿನ್ನ

  • ಕಾಮನ್‌ವೆಲ್ತ್‌ ಕ್ರೀಡಾಕೂಟ (2018);ಚಿನ್ನ

  • ಏಷ್ಯನ್‌ ಚಾಂಪಿಯನ್‌ಷಿಪ್‌ (2017);ಚಿನ್ನ

  • ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ (2016);ಚಿನ್ನ

  • ಏಷ್ಯನ್‌ ಜೂನಿಯರ್ ಚಾಂಪಿಯನ್‌ಷಿಪ್‌ (2016);ಬೆಳ್ಳಿ

  • ಸೌತ್‌ ಏಷ್ಯನ್‌ ಗೇಮ್ಸ್‌ (2016); ಚಿನ್ನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.