ADVERTISEMENT

ನೆಟ್ಟಕಲ್ಲಪ್ಪ ಈಜು ಸ್ಪರ್ಧೆ: ಧೀನಿಧಿ ದೇಸಿಂಗು ಚಿನ್ನ ಡಬಲ್

ವಿದಿತ್ ಮಿಂಚು: ಶ್ರೀಹರಿ ಮೌಲ್ಯಯುತ ಈಜುಗಾರ

ಗಿರೀಶ ದೊಡ್ಡಮನಿ
Published 9 ನವೆಂಬರ್ 2025, 20:30 IST
Last Updated 9 ನವೆಂಬರ್ 2025, 20:30 IST
<div class="paragraphs"><p>ಮಹಿಳೆಯರ ವಿಭಾಗದಲ್ಲಿ ಪದಕ ಜಯಿಸಿದ ನೀನಾ ವೆಂಕಟೇಶ್&nbsp; </p></div>

ಮಹಿಳೆಯರ ವಿಭಾಗದಲ್ಲಿ ಪದಕ ಜಯಿಸಿದ ನೀನಾ ವೆಂಕಟೇಶ್ 

   

 –ಪ್ರಜಾವಾಣಿ ಚಿತ್ರ

ಬೆಂಗಳೂರು: ಒಲಿಂಪಿಯನ್ ಧಿನಿಧಿ ದೇಸಿಂಗು ಭಾನುವಾರ ಇಲ್ಲಿ ನಡೆದ ‘ನೆಟ್ಟಕಲ್ಲಪ್ಪ ಈಜು ಸ್ಪರ್ಧೆ’ಯಲ್ಲಿ ಚಿನ್ನ ಡಬಲ್ ಸಾಧನೆ ಮಾಡಿದರು. 

ADVERTISEMENT

ನೆಟ್ಟಕಲ್ಲಪ್ಪ ಅಕ್ವಾಟೆಕ್ ಸೆಂಟರ್‌ನಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಮಹಿಳೆಯರ (15 ವರ್ಷ ಮತ್ತು ಮೇಲಿನವರು) ವಿಭಾಗದ 400 ಮೀಟರ್ಸ್ ಫ್ರೀಸ್ಟೈಲ್ ಹಾಗೂ 50 ಮೀ ಫ್ರೀಸ್ಟೈಲ್‌ನಲ್ಲಿ ಚಿನ್ನ ಗೆದ್ದರು. ಡಾಲ್ಫಿನ್ ಈಜು ಕೇಂದ್ರದ ಧಿನಿಧಿ ಅವರು ಹೋದ ವರ್ಷ ನಡೆದಿದ್ದ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಭಾಗವಹಿಸಿದ್ದರು.    

ಪುರುಷರ ವಿಭಾಗದ 100 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಡಾಲ್ಫಿನ್ ಕ್ಲಬ್‌ನ ವಿದಿತ್ ಎಸ್  ಶಂಕರ್ ಚಿನ್ನ ಗೆದ್ದರು. ಬಾಲಕರ 100 ಮೀ ಮೆಡ್ಲೆ (13–14ವರ್ಷದೊಳಗಿವರು) ವಿಭಾಗದಲ್ಲಿ ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್ ನ  ಅದ್ವೈತ್ ಬಾಬಾಸಾಹೇಬ್ ದಳವಿ ಮೊದಲಿಗರಾದರು. 

ಫಲಿತಾಂಶಗಳು

ಪುರುಷರು

50 ಮೀ ಬ್ರೆಸ್ಟ್‌ಸ್ಟೋಕ್: ಎಸ್ ಸುನೀಶ್ (ಗ್ಲೋಬಲ್ ಸ್ವಿಮ್–1, ಸೂರ್ಯ ಜೋಯಪ್ಪ (ಬಸವನಗುಡಿ)–2, ಎಲ್. ಮಣಿಕಂಠ (ಬಸವನಗುಡಿ)–3 ಕಾಲ: 29.74ಸೆ. 

100 ಮೀ ಬ್ರೆಸ್ಟ್‌ಸ್ಟ್ರೋಕ್: ವಿದಿತ್ ಎಸ್ ಶಂಕರ್ (ಡಾಲ್ಫಿನ್)–1, ಸೂರ್ಯ ಜೋಯಪ್ಪ (ಬಸವನಗುಡಿ)–2, ಎಸ್. ಸುನೀಶ್ (ಗ್ಲೋಬಲ್)–3 ಕಾಲ: 1ನಿ,06.34ಸೆ. 

15 ವರ್ಷ–ಮೇಲಿನವರು: 400 ಮೀ ಫ್ರೀಸ್ಟೈಲ್: ಎಸ್. ದಕ್ಷಣ್ (ಬಸವನಗುಡಿ)–1, ಎಸ್. ದರ್ಶನ್ (ಬಸವನಗುಡಿ)–2, ಪಿ.ವಿ. ಮೊನಿಷ್ (ಬಸವನಗುಡಿ)–3 ಕಾಲ: 4ನಿ,13.30ಸೆ. 

15 ವರ್ಷ–ಮೇಲಿನವರು: 50 ಮೀ ಬ್ರೆಸ್ಟ್‌ಸ್ಟ್ರೋಕ್: ಆದಿತ್ಯ ದುಬೆ (ಗ್ಲೋಬಲ್)–1, ವಿದಿತ್ ಎಸ್ ಶಂಕರ್ (ಡಾಲ್ಫಿನ್)–2, ಎಸ್. ಸುನೀಶ್ (ಗ್ಲೋಬಲ್)–3. ಕಾಲ: 29.62ಸೆ.

50 ಮೀ ಫ್ರೀಸ್ಟೈಲ್: ಆಕಾಶ್ ಮಣಿ (ಬಸವನಗುಡಿ)–1, ಶ್ರೀಹರಿ ನಟರಾಜ್ (ಡಾಲ್ಫಿನ್)–2, ಚಿಂತನ್ ಎಸ್ ಶೆಟ್ಟಿ (ಲಕ್ಷ್ಯನ್)–3 ಕಾಲ: 23.64ಸೆ. 

ಮಹಿಳೆಯರು

50 ಮೀ ಬ್ರೆಸ್ಟ್‌ಸ್ಟ್ರೋಕ್: ಮಾನವಿ ವರ್ಮಾ (ಡಾಲ್ಫಿನ್)–1, ಎ.ಕೆ. ಲಿನೇಶಾ(ಡಾಲ್ಫಿನ್)–2, ಲಕ್ಷ್ಯ ಶಿವಾನಂದ (ಬಸವನಗುಡಿ ಎಸಿ)–3. ಕಾಲ: 34.85ಸೆ. 

18 ವರ್ಷದವರು: ಲಕ್ಷ್ಯಾ ಶಿವಾನಂದ (ಬಸವನಗುಡಿ)–1, ಲಿನಿಶಾ ಎ.ಕೆ. (ಡಾಲ್ಫಿನ್)–2, ಯಶ್ವಿ ಕಾರಟ್ (ಗ್ಲೋಬಲ್)–3 ಕಾಲ: 1ನಿ,17.27ಸೆ. 

15 ವರ್ಷ ಮತ್ತು ಮೇಲ್ಟಟ್ಟವರು: 400 ಮೀ ಫ್ರೀಸ್ಟೈಲ್: ಧಿನಿಧಿ ದೇಸಿಂಗು (ಡಾಲ್ಫಿನ್)–1, ಶಿರಿನ್ (ಬಸವನಗುಡಿ)–2, ಅದಿತಿ ವಿನಾಯಕ ರೆಲೆಕರ್ (ಬಸವನಗುಡಿ)–3. ಕಾಲ: 4ನಿ,29.22ಸೆ. 

50 ಮೀ ಬ್ರೆಸ್ಟ್‌ಸ್ಟ್ರೋಕ್: ಎ.ಕೆ. ಲಿನಿಶಾ (ಡಾಲ್ಫಿನ್)–1, ಮಾನವಿ ವರ್ಮಾ (ಡಾಲ್ಫಿನ್)–2, ಲಕ್ಷ್ಯ ಶಿವಾನಂದ (ಬಸವನಗುಡಿ)–3 ಕಾಲ: 34.58ಸೆ.

50 ಮೀ ಬ್ರೆಸ್ಟ್‌ಸ್ಟ್ರೋಕ್ (15 ವರ್ಷ ಮೇಲಿನವರು): ಲಕ್ಷ್ಯ ಶಿವಾನಂದ (ಬಸವನಗುಡಿ)–1, ಎ.ಕೆ. ಲಿನಿಶಾ (ಡಾಲ್ಫಿನ್)–2, ಯಶಸ್ವಿ ಕರಾಟ್ (ಗ್ಲೋಬಲ್)–3 ಕಾಲ: 35.12ಸೆ. 

50 ಮೀ ಫ್ರೀಸ್ಟೈಲ್: ಧಿನಿಧಿ ದೇಸಿಂಗು (ಡಾಲ್ಫಿನ್)–1, ನೀನಾ ವೆಂಕಟೇಶ್ (ಡಾಲ್ಫಿನ್)–2, ವಿಹಿತಾ ನಯನಾ (ಬಸವನಗುಡಿ)–3  ಕಾಲ: 26.49ಸೆ. 

ಬಾಲಕರು

100 ಮೀ ಮೆಡ್ಲೆ: ಎಸ್. ಶರಣ್ (ಬಸವನಗುಡಿ)–1, ಟಿ. ಕಬೀಲನ್ (ಮತ್ಸ್ಯಾ)–2, ಜೀವಾಂಶ್ ಸುಬ್ರಮಣ್ಯ (ಮತ್ಸ್ಯಾ)–3, ಕಾಲ: 1ನಿ,03.01ಸೆ.

100 ಮೀ ಮೆಡ್ಲೆ (13–14ವರ್ಷದೊಳಗಿವರು): ಅದ್ವೈತ್ ಬಾಬಾಸಾಹೇಬ್ ದಳವಿ (ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್)–1, ರೋಹಿತ್ ಮುಂಡಾ (ಜಿಎಎಫ್‌–ಭುವನೇಶ್ವರ್)–2, ಎನ್. ವೈಭವ್ ಪ್ರತಾಪ್ (ಬೆಂಗಳೂರು ಈಜು ಅಕಾಡೆಮಿ)–3 ಕಾಲ: 1ನಿ,10.46ಸೆ.

100ಮೀ ಬ್ರೆಸ್ಟ್‌ಸ್ಟ್ರೋಕ್: ತನುಷ್ ಟಿ ಮೂರ್ತಿ (ಬಸವನಗುಡಿ)–1, ಅಯುಕ್ತ ಮೋಹನ್ (ಬಸವನಗುಡಿ)–2, ಸಮರ್ಥ್ ಭಾರದ್ವಾಜ್ (ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್)–3 ಕಾಲ: 1ನಿ,23.12ಸೆ. 

ಗುರಿಯತ್ತ ಮುನ್ನುಗ್ಗಿದ ಆಕಾಶ್ ಮಣಿ 

15–17 ವರ್ಷದವರು

100 ಮೀ ಬ್ರೆಸ್ಟ್‌ಸ್ಟ್ರೋಕ್: ವಿಶಂಗನ್ ಸರವಣನ್ (ಬಸವನಗುಡಿ)–1, ಯಶ್ ಎಚ್ ಪಾಲ್ (ಬಸವನಗುಡಿ)–2, ಆಯುಷ್ ಎಸ್. ಮಾಗನಹಳ್ಳಿ (ಡಾಲ್ಫಿನ್)–3

13–14 ವರ್ಷದವರು: ಚೇತನ್ ನಾಗರಾಜ ಗಣಪ (ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್)–1, ಸಿದ್ಧಾಂತ್ ಬಿ ಸಿಂಗ್ (ಪಿಎಂ ಸ್ವಿಮಿಂಗ್ ಸೆಂಟರ್)–2, ರೆಯಾಂಶ್ ಕಾಂತಿ (ಬಸವನಗುಡಿ)–3 ಕಾಲ: 1ನಿ,12.72ಸೆ. 

ಬಾಲಕಿಯರು

100 ಮೀ ಮೆಡ್ಲೆ: ತ್ರಿಶಾ ಸಿಂಧು (ಲಕ್ಷ್ಯನ್ ಅಕಾಡೆಮಿ)–1, ಮಾನ್ಯ ಆರ್ ವಾಧ್ವಾ (ಡಾಲ್ಫಿನ್)–2, ಇದಿಕಾ ಭಟ್ (ಝೀ ಸ್ವಿಮ್ ಅಕಾಡೆಮಿ)–3.ಕಾಲ: 1ನಿ,09.96ಸೆ.

100 ಮೀ ಬ್ರೆಸ್ಟ್‌ಸ್ಟ್ರೋಕ್: ದೃತಿ ಅಭಿಲಾಶ್ (ಬಸವನಗುಡಿ)–1, ಶ್ರೇಯಾ ಪೂಜಾರ್ (ಬೆಂಗಳೂರು ಈಜು ಅಕಾಡೆಮಿ)–2, ರಿಧಿ ಮಹೇಶ್ವರಿ (ಪಿ.ಎಂ. ಸ್ವಿಮ್ಮಿಂಗ್ ಸೆಂಟರ್)–3. ಕಾಲ: 1ನಿ,27.08ಸೆ).

15–17 ವರ್ಷದವರು

100 ಮೀ ಬ್ರೆಸ್ಟ್‌ಸ್ಟ್ರೋಕ್: ಮಾನವಿ ವರ್ಮಾ (ಡಾಲ್ಫಿನ್)–1, ಹಿಯಾ ಮನಚಂದಾ (ಬುಲ್‌ಬ್ಲಾಸ್ಟಿ ಅಕ್ವಾಟಿಕ್ಸ್)–2, ತಿಸ್ಯಾ ಸೊನಾರ್ (ಬಸವನಗುಡಿ)–3 ಕಾಲ: 1ನಿ.18.52ಸೆ.

13–14ವರ್ಷದವರು

100 ಮೀ ಬ್ರೆಸ್ಟ್‌ಸ್ಟ್ರೋಕ್: ಸಿರಿ ಪ್ರೀತಂ (ಏಕಲವ್ಯ)–1, ಇಂಚರಾ ಎಚ್‌ಆರ್ (ಲಕ್ಷ್ಯನ್)–2, ಮಾನ್ಯಾ ಆರ್ ವಾಧ್ವಾ (ಡಾಲ್ಫಿನ್)–3 ಕಾಲ: 1ನಿ,21.84ಸೆ. 

ನೆಟ್ಟಕಲ್ಲಪ್ಪ ಈಜು ಸ್ಪರ್ಧೆಯಲ್ಲಿ ‘ಮೌಲ್ಯಯುತ ಈಜುಗಾರರು’ ಗೌರವ ಗಳಿಸಿದವರು (ಎಡದಿಂದ) ತ್ರಿಷಾ ಎಸ್ ಸಿಂಧು ಧಿನಿಧಿ ದೇಸಿಂಗು ಶ್ರೀಹರಿ ನಟರಾಜ್   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.