ADVERTISEMENT

ಬಾಕ್ಸಿಂಗ್: 2ನೇ ಬಾರಿ ವಿಶ್ವ ಚಾಂಪಿಯನ್ ಆದ ಭಾರತದ ನಿಖತ್ ಜರೀನ್

ಪಿಟಿಐ
Published 26 ಮಾರ್ಚ್ 2023, 14:33 IST
Last Updated 26 ಮಾರ್ಚ್ 2023, 14:33 IST
ನಿಖತ್‌ ಜರೀನ್‌ (ಪಿಟಿಐ ಚಿತ್ರ)
ನಿಖತ್‌ ಜರೀನ್‌ (ಪಿಟಿಐ ಚಿತ್ರ)   

ನವದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ 52 ಕೆ.ಜಿ. ವಿಭಾಗದಲ್ಲಿ ವಿಯೆಟ್ನಾಂನ ಗುಯೆನ್ ಥಿ ಟಾಮ್ ಅವರನ್ನು ಮಣಿಸಿದ ಭಾರತದ ನಿಖತ್‌ ಜರೀನ್‌, ಎರಡನೇ ಬಾರಿಗೆ ಚಾಂಪಿಯನ್‌ ಎನಿಸಿದರು.

ನಿಖತ್‌ ಅವರು ಗುಯೆನ್‌ ವಿರುದ್ಧ 5–0 ಅಂತರದ ಜಯ ಸಾಧಿಸಿದರು.

ಈ ಹಿಂದೆ ಮೇರಿ ಕೋಮ್‌ ಅವರು ಆರು ಬಾರಿ (2002, 2005, 2006, 2008, 2010 ಹಾಗೂ 2018) ವಿಶ್ವ ಚಾಂಪಿಯನ್‌ ಆಗಿದ್ದರು. ಅವರನ್ನು ಹೊರತುಪಡಿಸಿ ಒಂದಕ್ಕಿಂತ ಹೆಚ್ಚುಸಲ ಚಾಂಪಿಯನ್‌ ಆದ ಬಾಕ್ಸರ್‌ ಎಂಬ ಖ್ಯಾತಿ ಇದೀಗ ನಿಖತ್‌ ಅವರದ್ದಾಯಿತು. ಸರಿತಾ ದೇವಿ (2006), ಜೆನ್ನಿ ಆರ್‌.ಎಲ್‌. (2006) ಹಾಗೂ ಲೇಖಾ ಕೆ.ಸಿ. (2006) ಅವರು ಒಂದೊಂದು ಬಾರಿ ಚಾಂಪಿಯನ್‌ ಆಗಿದ್ದರು.

ADVERTISEMENT

ಭಾರತದವರೇ ಆದ ನೀತು ಗಂಗಾಸ್‌ (48ಕೆ.ಜಿ. ವಿಭಾಗ) ಹಾಗೂ ಸ್ವೀಟಿ ಬೂರಾ (81ಕೆ.ಜಿ. ವಿಭಾಗ) ಶನಿವಾರ ನಡೆದ ಹಣಾಹಣಿಗಳಲ್ಲಿ ಚಾಂಪಿಯನ್‌ ಆಗಿದ್ದರು.

ಇದೇ ದಿನ ನಡೆಯುವ 75 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆಯಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್‌ ಅವರು ಆಸ್ಟ್ರೇಲಿಯಾದ ಕೈಟ್ಲಿನ್‌ ಪಾರ್ಕರ್‌ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.