ADVERTISEMENT

ಒಲಿಂಪಿಕ್ಸ್‌ ಮುಂದೂಡಿಕೆಯಿಂದ ನಿರಾಶೆ: ಭಾವನಾ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 17:26 IST
Last Updated 14 ಏಪ್ರಿಲ್ 2020, 17:26 IST
   

ನವದೆಹಲಿ: ಒಲಿಂಪಿಕ್‌ ಮುಂದೂಡಿಕೆಯಿಂದ ತರಬೇತಿಗೆ ಇನ್ನಷ್ಟು ಸಮಯ ದೊರಕಿದೆ ಎಂಬ ಭಾವನೆ ಭಾರತದ ಬಹಳಷ್ಟು ಅಥ್ಲೀಟುಗಳದ್ದು, ಆದರೆ ಭಾವನಾ ಜಾಟ್‌ ಅವರ ಅನಿಸಿಕೆಯೇ ಬೇರೆ. ಕೊರೊನಾ ಸೋಂಕು ಸೃಷ್ಟಿಸುತ್ತಿರುವ ಕೋಲಾಹಲದಿಂದ ಮುಂದಿನ ವರ್ಷವೂ ಒಲಿಂಪಿಕ್ಸ್‌ ಸಾಧ್ಯವಾಗಬಹುದೇ ಎಂಬ ಸಂದೇಹ ಅವರನ್ನು ಕಾಡುತ್ತಿದೆ.

ಭಾವನಾ ಒಲಿಂಪಿಕ್ಸ್‌ನ 20 ಕಿ.ಮೀ. ರೇಸ್‌ ವಾಕ್‌ಗೆ ಅರ್ಹತೆ ಪಡೆದಿದ್ದರು. ಫೆಬ್ರುವರಿಯಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಅಚ್ಚರಿಯ ಪ್ರದರ್ಶನ ನೀಡಿ ಒಲಿಂಪಿಕ್ಸ್‌ ಅರ್ಹತಾ ಗುರಿಯನ್ನು ಸಾಧಿಸಿದ್ದರು.ಕೊರೊನಾ ಪಿಡುಗಿನಿಂದ ಅಥ್ಲೀಟುಗಳ ಭವಿಷ್ಯ ಅನಿಶ್ಚಿತವಾಗುತ್ತಿದೆ ಎಂದು ಅವರು ಹೇಳಿದ್ದಾರೆ. ವಿಶ್ವದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್‌–19ಕ್ಕೆ ಬಲಿಯಾಗಿದ್ದಾರೆ.

‘ಒಲಿಂಪಿಕ್ಸ್ ಮುಂದಕ್ಕೆ ಹೋದಾಗ ಬೇಸರವಾಯಿತು. ನನ್ನ ಮನಸ್ಸು, ದೇಹ ಸಜ್ಜಾಗಿತ್ತು. ಉತ್ತಮ ಪ್ರದರ್ಶನದ ವಿಶ್ವಾಸವೂ ಇತ್ತು. ಮಾರ್ಚ್‌ನಲ್ಲಿ ಜಪಾನ್‌ನಲ್ಲೇ ನಿಗದಿಯಾಗಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ ನನಗೆ ಸಿದ್ಧತೆ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿತ್ತು. ಕೊರೊನಾ ಕಾರಣ ಅದೂ ಮುಂದಕ್ಕೆ ಹೋಯಿತು’ ಎಂದು ಬೇಸರ ತೋಡಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.