ADVERTISEMENT

ಸ್ಪೀಡ್‌ ಸ್ಕೇಟಿಂಗ್‌: ಒಲಿಂಪಿಕ್ಸ್ ದಾಖಲೆ ಬರೆದ ಗಾವೊ

ಚಳಿಗಾಲದ ಒಲಿಂಪಿಕ್ಸ್

ರಾಯಿಟರ್ಸ್
Published 12 ಫೆಬ್ರುವರಿ 2022, 13:55 IST
Last Updated 12 ಫೆಬ್ರುವರಿ 2022, 13:55 IST
ಗಾವೊ ಥಿಂಗ್ಯು– ರಾಯಿಟರ್ಸ್ ಚಿತ್ರ
ಗಾವೊ ಥಿಂಗ್ಯು– ರಾಯಿಟರ್ಸ್ ಚಿತ್ರ   

ಬೀಜಿಂಗ್‌: ಚೀನಾದ ಗಾವೊ ಥಿಂಗ್ಯು ಅವರು ಒಲಿಂಪಿಕ್ಸ್ ದಾಖಲೆಯೊಂದಿಗೆ ಚಳಿಗಾಲದ ಒಲಿಂಪಿಕ್ಸ್‌ನ ಪುರುಷರ ಸ್ಪೀಡ್‌ ಸ್ಕೇಟಿಂಗ್‌ನಲ್ಲಿ ಚೀನಾಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು.

ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಮುನ್ನುಗ್ಗಿದ ಅವರು ಶನಿವಾರ 500 ಮೀಟರ್ಸ್ ವಿಭಾಗದಲ್ಲಿ 34.32 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ನಾಲ್ಕು ವರ್ಷಗಳ ಹಿಂದೆ ಕೂಟದ ಇದೇ ವಿಭಾಗದಲ್ಲಿ ಕಂಚು ಜಯಿಸಿದ್ದ ಗಾವೊ, ಒಲಿಂಪಿಕ್ಸ್‌ನ ಸ್ಪೀಡ್‌ ಸ್ಕೇಟಿಂಗ್‌ನಲ್ಲಿ ಪದಕವೊಂದನ್ನು ಗಳಿಸಿದ ಚೀನಾದ ಮೊದಲ ಅಥ್ಲೀಟ್‌ ಎನಿಸಿಕೊಂಡಿದ್ದರು.

ದಕ್ಷಿಣ ಕೊರಿಯಾದ ಚಾ ಮಿನ್‌ ಕ್ಯು (34.39 ಸೆ) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರೆ, ಜಪಾನ್‌ನ ವಟಾರು ಮೊರ್ಷಿಗೆ 34.49 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕಂಚು ಗೆದ್ದರು.

ADVERTISEMENT

ಈ ವಿಭಾಗದಲ್ಲಿ ಪದಕ ಗೆಲ್ಲುವ ನೆಚ್ಚಿನ ಅಥ್ಲೀಟ್ ಆಗಿದ್ದ ಕೆನಡಾದ ಲಾರೆಂಟ್‌ ಡುಬ್ರೆವಿಲ್‌ ನಾಲ್ಕನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು.

ಸ್ಕೀ ಜಂಪಿಂಗ್‌: ಅಮೋಘ 151.3 ಪಾಯಿಂಟ್ಸ್ ದಾಖಲಿಸುವುದರೊಂದಿಗೆ ನಾರ್ವೆಯ ಮಾರಿಯಸ್‌ ಲಿಂಡ್ವಿಕ್ ಅವರು ಲಾರ್ಜ್‌ ಹಿಲ್‌ ಸ್ಕೀ ಜಂಪಿಂಗ್‌ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.

ಈ ವಿಭಾಗದಲ್ಲಿ ಜಪಾನ್‌ನ ರೊವೊಯು ಕೊಬಾಯಶಿ (147) ಬೆಳ್ಳಿ ಮತ್ತು ಜರ್ಮನಿಯ ಕಾರ್ಲ್‌ ಜೀಜೆರ್‌ (144.4) ಕಂಚಿನ ಪದಕ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.