ADVERTISEMENT

ಕ್ರಿಕೆಟ್: ಪಾಕಿಸ್ತಾನ ವಿರುದ್ಧ ಮುಂದುವರಿದ ವಿಂಡೀಸ್‌ ಬೇಗುದಿ

ಪಿಟಿಐ
Published 1 ಆಗಸ್ಟ್ 2025, 13:20 IST
Last Updated 1 ಆಗಸ್ಟ್ 2025, 13:20 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಲಾಡರ್‌ಹಿಲ್‌ (ಫ್ಲಾರಿಡಾ): ಸ್ಪಿನ್‌ ಬೌಲರ್‌ಗಳ ಉತ್ತಮ ಪ್ರದರ್ಶನದ ನೆರವಿನಿಂದ ಪಾಕಿಸ್ತಾನ ತಂಡವು, ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಗುರುವಾರ ವೆಸ್ಟ್‌ ಇಂಡೀಸ್‌ ತಂಡವನ್ನು 14 ರನ್‌ಗಳಿಂದ ಸೋಲಿಸಿತು.

ADVERTISEMENT

ಈ ಸೋಲಿನೊಡನೆ ಚುಟುಕು ಕ್ರಿಕೆಟ್‌ನಲ್ಲಿ ವೆಸ್ಟ್‌ ಇಂಡೀಸ್ ಸೋಲಿನ ಸರಮಾಲೆ ಮುಂದುವರಿಯಿತು. ಆಸ್ಟ್ರೇಲಿಯಾ ವಿರುದ್ಧ ಅದು 0–5 ಮುಖಭಂಗ ಅನುಭವಿಸಿತ್ತು.

ಟಾಸ್‌ ಸೋತಿದ್ದ ಪಾಕಿಸ್ತಾನ 6 ವಿಕೆಟ್‌ಗೆ 178 ರನ್ ಹೊಡೆಯಿತು. ಆರಂಭ ಆಟಗಾರ ಸಯೀಮ್‌ ಅಯೂಬ್ (57, 38ಎ, 4x5, 6x2) ಅರ್ಧ ಶತಕ ಬಾರಿಸಿದರು. ವೆಸ್ಟ್‌ ಇಂಡೀಸ್‌ 7 ವಿಕೆಟ್‌ಗೆ 164 ರನ್ ಗಳಿಸಲಷ್ಟೇ ಶಕ್ತವಾಯಿತು.

ಟಿ20ಗೆ ಪದಾರ್ಪಣೆ ಮಾಡಿದ ಆರಂಭ ಆಟಗಾರ 18 ವರ್ಷ ವಯಸ್ಸಿನ ಜುವೆಲ್ ಆ್ಯಂಡ್ರೂ (35, 33ಎ, 4cx2, 6x3) ಮತ್ತು ಆರಂಭ ಆಟಗಾರ ಜಾನ್ಸನ್ ಚಾರ್ಲ್ಸ್‌ (35, 36ಎ) ಮೊದಲ ವಿಕೆಟ್‌ಗೆ 67 ಎಸೆತಗಳಲ್ಲಿ 72 ರನ್ ಸೇರಿಸಿದರು. ತಂಡ ನಂತರ ಕುಸಿಯಿತು. ಜೇಸನ್ ಹೋಲ್ಡರ್‌ 12 ಎಸೆತಗಳಲ್ಲಿ ಅಜೇಯ 30 ರನ್ ಮತ್ತು ಶಮರ್ ಜೋಸೆಫ್‌ 12 ಎಸೆತಗಳಲ್ಲಿ 21 ರನ್ ಬಾರಿಸಿದರೂ ಗೆಲುವು ಎಟುಕಲಿಲ್ಲ.

ಎಡಗೈ ಸ್ಪಿನ್ನರ್ ಮೊಹಮ್ಮದ್ ನವಾಜ್ (23ಕ್ಕೆ) ಮತ್ತು ಆಫ್‌ ಸ್ಪಿನ್ನರ್ ಸಯೀಮ್ ಅಯೂಬ್ (20ಕ್ಕೆ2) ಅವರು ವೆಸ್ಟ್‌ ಇಂಡೀಸ್‌ಗೆ ಅಂಕುಶ ತೊಡಿಸಿದರು.

ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯ ಶನಿವಾರ ಇಲ್ಲಿಯೇ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.