ADVERTISEMENT

ಎವೈಜಿ: 5,000 ಮೀ. ನಡಿಗೆ ಸ್ಪರ್ಧೆಯಲ್ಲಿ ಪಲಾಶ್‌ಗೆ ಕಂಚು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 15:46 IST
Last Updated 24 ಅಕ್ಟೋಬರ್ 2025, 15:46 IST
<div class="paragraphs"><p>ನಡಿಗೆ ಸ್ಪರ್ಧೆ</p></div>

ನಡಿಗೆ ಸ್ಪರ್ಧೆ

   

ರಿಫಾ (ಬಹರೇನ್‌): ಭಾರತದ ಪಲಾಶ್‌ ಮಂಡಲ್ ಅವರು ಏಷ್ಯನ್ ಯೂತ್‌ ಗೇಮ್ಸ್‌ನ (ಎವೈಜಿ) ಬಾಲಕರ 5,000 ಮೀ. ನಡಿಗೆ ಸ್ಪರ್ಧೆಯಲ್ಲಿನ ಶುಕ್ರವಾರ ಕಂಚಿನ ಪದಕ ಗೆದ್ದುಕೊಂಡರು.

ಮಂಡಲ್ ಈ ದೂರವನ್ನು 24ನಿ.48.92 ಸೆ.ಗಳಲ್ಲಿ ಕ್ರಮಿಸಿದರು. ಚೀನಾದ ಹಾವೊಝ್ ಝಾಂಗ್ (21ನಿ.43.82 ಸೆ.) ಚಿನ್ನ ಗೆದ್ದರೆ, ಅದೇ ದೇಶದ ಯುಜೀ ಲು (22ನಿ.28.64 ಸೆ.) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಈ ಸ್ಪರ್ಧೆಯಲ್ಲಿ ಕೂಟ ದಾಖಲೆ ಭಾರತದ ನಿತಿನ್ ಗುಪ್ತಾ ಅವರ ಹೆಸರಿನಲ್ಲಿದೆ. ನಿತಿನ್ 2025ರಲ್ಲಿ ಪಟ್ನಾದಲ್ಲಿ 19ನಿ.24.48 ಸೆ.ಗಳಲ್ಲಿ ನಡಿಗೆ ಪೂರೈಸಿ ದಾಖಲೆ ಸ್ಥಾಪಿಸಿದ್ದರು.

ADVERTISEMENT

ಈ ಕ್ರೀಡಾಕೂಟ ಅಕ್ಟೋಬರ್ 27ರಂದು ಕೊನೆಗೊಳ್ಳಲಿದೆ. ಭಾರತ ಈ ಕೂಟದಲ್ಲಿ 2 ಚಿನ್ನ, ಮೂರು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ಅಗ್ರಸ್ಥಾನದಲ್ಲಿರುವ ಚೀನಾ ಎಂಟು ಚಿನ್ನ, 11 ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಬಾಚಿದೆ. ಥಾಯ್ಲೆಂಡ್ (6–2–2), ಉಜ್ಬೇಕಿಸ್ತಾನ (6–2–2) ಮತ್ತು ಇರಾನ್‌ (3–5–6) ನಂತರದ ಸ್ಥಾನಗಳನ್ನು ಪಡೆದಿವೆ.

45 ರಾಷ್ಟ್ರಗಳ ತಂಡಗಳು ಕಣದಲ್ಲಿವೆ. ಒಟ್ಟು 21 ಕ್ರೀಡೆಗಳಲ್ಲಿ 1677 ಪದಕಗಳು (505 ಚಿನ್ನ– 503 ಬೆಳ್ಳಿ– 669 ಕಂಚು)  ಪಣಕ್ಕಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.