ಸಮಾರೋಪ ಸಮಾರಂಭದ ಪರೇಡ್‌ನಲ್ಲಿ ಚಿನ್ನದ ಪದಕ ವಿಜೇತ ಆರ್ಚರಿಪಟು ಹರ್ವಿಂದರ್ ಸಿಂಗ್ ಮತ್ತು ಡಬಲ್ ಕಂಚು ಗೆದ್ದ ಅಥ್ಲೀಟ್ ಪ್ರೀತಿ ಪಾಲ್ ಭಾರತದ ಧ್ವಜಧಾರಿಯಾಗಿದ್ದರು
–ಎಕ್ಸ್ ಚಿತ್ರ
ಪ್ಯಾರಿಸ್: ಆಗಸ್ಟ್ 28ರಂದು ಆರಂಭವಾದ ಪ್ಯಾರಾಲಿಂಪಿಕ್ಸ್‌ಗೆ ಭಾನುವಾರ ತಡರಾತ್ರಿ ತೆರೆಬಿದ್ದಿದೆ. ಸ್ಟೇಡ್ ಡಿ ಫ್ರಾನ್ಸ್ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದೊಂದಿಗೆ 17ನೇ ಆವೃತ್ತಿಯ ಕ್ರೀಡಾಕೂಟ ಸಂಪನ್ನಗೊಂಡಿತು. ವರ್ಣರಂಜಿತ ಸಮಾರೋಪವು ಸಂಗೀತ, ಬೆಳಕಿನ ವೈಭವದೊಂದಿಗೆ ಪ್ರೇಕ್ಷಕರ ಮನಸೊರೆಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.