ADVERTISEMENT

ಚೆಸ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಹಿಂದಿಕ್ಕಿ ನಂ.1 ಪಟ್ಟವೇರಿದ ಪ್ರಜ್ಞಾನಂದ

ಪಿಟಿಐ
Published 17 ಜನವರಿ 2024, 10:29 IST
Last Updated 17 ಜನವರಿ 2024, 10:29 IST
<div class="paragraphs"><p>ಆರ್‌.ಪ್ರಜ್ಞಾನಂದ ಮತ್ತು ವಿಶ್ವ ಚೆಸ್‌ ಚಾಂಪಿಯನ್‌ ಡಿಂಗ್‌ ಲಿರೇನ್‌</p></div>

ಆರ್‌.ಪ್ರಜ್ಞಾನಂದ ಮತ್ತು ವಿಶ್ವ ಚೆಸ್‌ ಚಾಂಪಿಯನ್‌ ಡಿಂಗ್‌ ಲಿರೇನ್‌

   

ಚಿತ್ರ ಕೃಪೆ– @ChessbaseIndia

ನೆದರ್ಲೆಂಡ್ಸ್‌: ವಿಶ್ವ ಚೆಸ್‌ ಚಾಂಪಿಯನ್‌ ಡಿಂಗ್‌ ಲಿರೇನ್‌ ಅವರನ್ನು ಸೋಲಿಸುವ ಮೂಲಕ ಭಾರತದ ಗ್ರ್ಯಾಂಡ್‌ ಮಾಸ್ಟರ್ ವಿಶ್ವನಾಥ್‌ ಆನಂದ್‌ ಅವರನ್ನು ಹಿಂದಿಕ್ಕಿ ಆರ್‌.ಪ್ರಜ್ಞಾನಂದ ಅವರು ನಂ.1 ಚೆಸ್‌ ಚಾಂಪಿಯನ್‌ ಪಟ್ಟಕ್ಕೇರಿದ್ದಾರೆ.

ADVERTISEMENT

ನೆದರ್ಲೆಂಡ್ಸ್‌ನ ವಿಜ್ಕ್ ಆನ್ ಝೀನಲ್ಲಿ ನಡೆದ ಟಾಟಾ ಸ್ಟೀಲ್‌ ಚೆಸ್‌ ಟೂರ್ನ್‌ಮೆಂಟ್‌ನಲ್ಲಿ ಪ್ರಜ್ಞಾನಂದ ಅವರು ಈ ದಾಖಲೆ ನಿರ್ಮಿಸಿದರು.

ಮಂಗಳವಾರ ತಡರಾತ್ರಿ ಗೆಲುವಿನ ನಂತರ, 18 ವರ್ಷದ ಪ್ರಜ್ಞಾನಂದ FIDE ಲೈವ್ ರೇಟಿಂಗ್‌ಗಳಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್‌ ಆನಂದ್ ಅವರನ್ನು ಹಿಂದಿಕ್ಕಿದ್ದಾರೆ.

ವಿಶ್ವನಾಥನ್‌ ಆನಂದ್‌ ಅವರು 2,748 ಪಾಯಿಂಟ್‌ ಗಳಿಸಿ ವಿಶ್ವ ಚಾಂಪಿಯನ್‌ ಆಗಿದ್ದರು. ಇದೀಗ ಪ್ರಜ್ಞಾನಂದ ಅವರು 2,748.3 ಪಾಯಿಂಟ್‌ ಗಳಿಸಿದ್ದಾರೆ. ವಿಶ್ವ ಚೆಸ್ ಸಂಸ್ಥೆಯು ಪ್ರತಿ ತಿಂಗಳ ಆರಂಭದಲ್ಲಿ ರೇಟಿಂಗ್‌ಗಳನ್ನು ಪ್ರಕಟಿಸುತ್ತದೆ.

ಕಪ್ಪು ಕಾಯಿಗಳೊಂದಿಗೆ ಆಟ ಆರಂಭಿಸಿದ ಪ್ರಜ್ಞಾನಂದ ಅವರು 62-ನಡೆಗಳ ಗೆಲುವುದು ದಾಖಲಿಸಿದರು. ಇದರಿಂದ ಪ್ರಜ್ಞಾನಂದ ಅವರು ವಿಶ್ವನಾಥನ್‌ ಆನಂದ್ ನಂತರ ಚೆಸ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌ನನ್ನು ಸೋಲಿಸಿದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರಜ್ಞಾನಂದ ಅವರು, ‘ ಗೆಲುವು ಖುಷಿ ನೀಡುತ್ತಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.