ಹೈದರಾಬಾದ್: ಆರಂಭಿಕ ಹಿನ್ನಡೆಯಿಂದ ಪುಟಿದೆದ್ದ ಅಹಮದಾಬಾದ್ ಡಿಫೆಂಡರ್ಸ್ ತಂಡವು ಪ್ರೈಮ್ ವಾಲಿಬಾಲ್ ಲೀಗ್ (ಪಿವಿಎಲ್) ಪಂದ್ಯದಲ್ಲಿ ಶನಿವಾರ 13–15, 13–15, 15–13, 15–8, 18–16ರಿಂದ ದೆಹಲಿ ತೂಫಾನ್ಸ್ ತಂಡದ ಎದುರು ರೋಚಕ ಜಯ ಸಾಧಿಸಿತು.
ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಅಹಮದಾಬಾದ್ ತಂಡವು ಆರಂಭಿಕ ಎರಡು ಸೆಟ್‌ಗಳಲ್ಲಿ ಹಿನ್ನಡೆ ಸಾಧಿಸಿತ್ತು. ಬಳಿಕ ಲಯ ಕಂಡುಕೊಂಡ ಡಿಫೆಂಡರ್ಸ್ ಆಟಗಾರರು ಗೆಲುವು ಕಸಿದುಕೊಂಡು ದೆಹಲಿ ತಂಡಕ್ಕೆ ಆಘಾತ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.