‘ಸೂಪರ್ ಟೆನ್’ ಸಾಧನೆ ಮಾಡಿದ ಬುಲ್ಸ್ ತಂಡದ ಆಕಾಶ್ ಶಿಂದೆ
-ಎಕ್ಸ್ ಚಿತ್ರ
ವಿಶಾಖಪಟ್ಟಣ: ಬೆಂಗಳೂರು ಬುಲ್ಸ್ ತಂಡವು ಶುಕ್ರವಾರ ಆರಂಭವಾದ ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ‘ಗೋಲ್ಡನ್ ರೇಡ್ಸ್’ ನಂತರ ಪುಣೇರಿ ಪಲ್ಟನ್ ಎದುರು ನಿರಾಸೆ ಅನುಭವಿಸಿತು.
ನಿಗದಿತ ಅವಧಿಯಲ್ಲಿ ಉಭಯ ತಂಡಗಳು 32–32 ಅಂಕಗಳಿಂದ ಸಮಬಲ ಸಾಧಿಸಿದವು. ನಂತರ ನಡೆದ ‘ಗೋಲ್ಡನ್ ರೇಡ್’ ಟೈಬ್ರೇಕರ್‌ನಲ್ಲಿ ಪುಣೇರಿ 6–4ರಿಂದ ಗೆಲುವು ಸಾಧಿಸಿತು. ಈ ಹಿಂದೆ ಪ್ಲೇ ಆಫ್ ಪಂದ್ಯಗಳಿಗೆ ಮಾತ್ರ ಸೀಮಿತವಾಗಿದ್ದ ‘ಗೋಲ್ಡನ್ ರೇಡ್’ ನಿಯಮವನ್ನು ಈ ಬಾರಿ ಲೀಗ್ ಹಂತಕ್ಕೂ ವಿಸ್ತರಿಸಲಾಗಿದೆ.
ಅನುಭವಿ ಕೋಚ್ ಬಿ.ಸಿ. ರಮೇಶ್ ಅವರ ಗರಡಿಯಲ್ಲಿ ಪಳಗಿರುವ ಬುಲ್ಸ್ ಆಟಗಾರರು ರೇಡಿಂಗ್ ಮತ್ತು ಟ್ಯಾಕಲ್ ಎರಡರಲ್ಲಿ ಮಿಂಚಿದರೂ ಪದೇ ಪದೇ ಸಮನ್ವಯ ಕಾಯ್ದುಕೊಳ್ಳಲು ಎಡವಿದರು. ಬುಲ್ಸ್ ರೇಡರ್ ಆಕಾಶ್ ಶಿಂದೆ (12) ಸೂಪರ್ ಟೆನ್ ಸಾಧನೆ ಮಾಡಿದರು. ಅವರಿಗೆ ಆಶಿಶ್ ಮಲಿಕ್ (8) ಸಾಥ್ ನೀಡಿದರು. ಪುಣೇರಿ ತಂಡದ ಗೆಲುವಿನಲ್ಲಿ ಆದಿತ್ಯ ಶಿಂದೆ (9) ಮತ್ತು ಪಂಕಜ್ ಮೋಹಿತೆ (6) ಪ್ರಮುಖ ಪಾತ್ರ ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.