ADVERTISEMENT

ರಾಷ್ಟ್ರೀಯ ಕ್ರೀಡೆಗಳ ಗಾತ್ರ ಮೊಟಕು: ಉಷಾ ಪ್ರಸ್ತಾವ

ಪಿಟಿಐ
Published 17 ಜನವರಿ 2025, 0:19 IST
Last Updated 17 ಜನವರಿ 2025, 0:19 IST
ಪಿ.ಟಿ.ಉಷಾ
ಪಿ.ಟಿ.ಉಷಾ   

ನವದೆಹಲಿ: ‘ಹಲವು ಪ್ರಾದೇಶಿಕ ಆಟ’ಗಳನ್ನು ಪದಕದ ಕ್ರೀಡೆಯಾಗಿಸುವುದನ್ನು ತಪ್ಪಿಸುವ ಉದ್ದೇಶದಿಂದ ಒಲಿಂಪಿಕ್ಸ್‌, ಕಾಮನ್ವೆಲ್ತ್ ಮತ್ತು ಏಷ್ಯನ್ ಕ್ರೀಡೆಗಳಲ್ಲಿರುವ ಆಟಗಳನ್ನೇ, ಭವಿಷ್ಯದ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪರಿಗಣಿಸಬೇಕು ಎಂದು ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ ಪಿ.ಟಿ.ಉಷಾ ಅವರು
ಗುರುವಾರ ಪ್ರಸ್ತಾವ ಮುಂದಿಟ್ಟಿದ್ದಾರೆ.

ಒಲಿಂಪಿಕ್ ಸಂಸ್ಥೆಯ ಮುಂದಿನ ಸಾಮಾನ್ಯಸಭೆಯಲ್ಲಿ ಈ ಪ್ರಸ್ತಾವ ಮಂಡಿಸುವುದಾಗಿ ಉಷಾ ತಿಳಿಸಿದ್ದಾರೆ.

ರಾಷ್ಟ್ರೀಯ ಕ್ರೀಡೆಗಳು ಶುರುವಾಗುವ ಒಂದು ವರ್ಷ ಮೊದಲಿನವರೆಗೆ ಐಒಎ ಜೊತೆ ‘ಉತ್ತಮ ಬಾಂಧವ್ಯ’ ಹೊಂದಿರುವ ರಾಷ್ಟ್ರೀಯ ಫೆಡರೇಷನ್‌ನ ಕ್ರೀಡೆಗಳನ್ನು ಮಾತ್ರ ಪರಿಗಣಿಸಬೇಕೆಂದು ಪ್ರಸ್ತಾವದಲ್ಲಿ ಸೇರಿಸುವುದಾಗಿಯೂ ಉಷಾ ಹೇಳಿದ್ದಾರೆ.

ADVERTISEMENT

‘ರಾಷ್ಟ್ರೀಯ ಕ್ರೀಡೆಗಳ ತಾಂತ್ರಿಕ ಆಯೋಜನಾ ಸಮಿತಿಯು (ಜಿಟಿಸಿಸಿ) ಕಳೆದ ಬಾರಿಯ ಕ್ರೀಡೆಗಳಲ್ಲಿ ಹಲವು ಪ್ರಾದೇಶಿಕ ಕ್ರೀಡೆಗಳನ್ನು ಪದಕ ಕ್ರೀಡೆಗಳನ್ನಾಗಿ ಸೇರ್ಪಡೆಗೊಳಿಸಿತ್ತು. ಐಒಎಗೆ ಈ ಕ್ರೀಡೆಗಳ ಮಹತ್ವದ ಅರಿವು ಇದೆ. ಆದರೆ ಪ್ರದರ್ಶನ ಕ್ರೀಡೆಗಳು ಮತ್ತು ಪದಕ ಕ್ರೀಡೆಗಳ ನಡುವೆ ಸ್ಪಷ್ಟವಾದ ಗೆರೆಯಿರಬೇಕು ಎಂದು ಉಷಾ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.