ಝೂಲ್ (ಜರ್ಮನಿ): ಭಾರತದ ರೈಝಾ ಧಿಲ್ಲೋನ್ ಅವರು ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನ ಮಹಿಳೆಯರ ಸ್ಕೀಟ್ ಸ್ಪರ್ಧೆಯಲ್ಲಿ ಗುರುವಾರ ಬೆಳ್ಳಿ ಗೆದ್ದುಕೊಂಡರು. ಇದು ಈ ಕೂಟದಲ್ಲಿ ಭಾರತಕ್ಕೆ ಮೂರನೇ ಪದಕ.
ಒಲಿಂಪಿಯನ್ ದಿಲ್ಲೋನ್ ಅವರು 60 ಶಾಟ್‌ಗಳ ಫೈನಲ್‌ನಲ್ಲಿ 51 ಸಲ ಯಶಸ್ವಿಯಾಗಿ ಗುರಿಯಿಟ್ಟರು. ಬ್ರಿಟನ್‌ನ ಬೋಡ್ಲಿ–ಸ್ಕಾಟ್ (53 ಸಲ ಗುರಿಸಾಧನೆ) ಚಿನ್ನ ಗೆದ್ದರೆ, ಸ್ಥಳೀಯ ಫೇವರಿಟ್ ಅನ್ನಾಬೆಲ್ಲಾ ಹೆಟ್ಮೆರ್ ಕಂಚಿನ ಪದಕ ಗೆದ್ದುಕೊಂಡರು. ಇದು ರೈಝಾ ಅವರಿಗೆ ವಿಶ್ವಕಪ್‌ನಲ್ಲಿ ಮೊದಲ ಪದಕವಾಗಿದೆ.
ಭಾರತದ ಕನಕ್, ಬುಧವಾರ ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು. ಮೊದಲ ದಿನವಾದ ಮಂಗಳವಾರ ಅಡ್ರಿಯಾನ್ ಕರ್ಮಾಕರ್ ಪುರುಷರ 50 ಮೀ. ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.