ADVERTISEMENT

ಎಂಎಂಎ ಸ್ಪರ್ಧೆಗೆ ರಿತು ಪೋಗಟ್ ತರಬೇತಿ

ಪಿಟಿಐ
Published 16 ಜೂನ್ 2019, 20:00 IST
Last Updated 16 ಜೂನ್ 2019, 20:00 IST
ರಿತು ಪೋಗಟ್
ರಿತು ಪೋಗಟ್   

ಸಿಂಗಪುರ: ಭಾರತದ ಕುಸ್ತಿಪಟು ರಿತು ಪೋಗಟ್‌ ಸಿಂಗಪುರ ಮಿಕ್ಸೆಡ್‌ ಮಾರ್ಷಲ್‌ ಆರ್ಟ್ಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ‘ಒನ್‌’ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಸ್ಪರ್ಧೆಗೆ ರಿತು ಸಿದ್ಧವಾಗಿದ್ದಾರೆ.

140ಕ್ಕಿಂತ ಹೆಚ್ಚು ದೇಶಗಳಲ್ಲಿ ಈ ಟೂರ್ನಿ ಪ್ರಸಾರವಾಗಲಿದೆ.

ಪ್ರಸಿದ್ಧ ಪೋಗಟ್‌ ಕುಸ್ತಿ ಕುಟುಂಬದಿಂದ ಬಂದಿರುವ ರಿತು, ಈ ವರ್ಷಾರಂಭದಲ್ಲಿ ಪಾರಂಪರಿಕ ಕ್ರೀಡೆಯನ್ನು ತೊರೆದು ಮಿಕ್ಸೆಡ್‌ ಮಾರ್ಷಲ್‌ ಆರ್ಟ್ಸ್‌(ಎಂಎಂಎ) ನಲ್ಲಿ ವೃತ್ತಿಬದುಕು ಕಂಡುಕೊಳ್ಳಲು ನಿರ್ಧರಿಸಿದ್ದರು.

ADVERTISEMENT

ಭಾರತದ ಪರ ಕುಸ್ತಿಯಲ್ಲಿ ಹಲವು ಪ್ರಶಸ್ತಿಗಳನ್ನು ತಂದುಕೊಟ್ಟಿರುವ ರಿತು, ಸಿಂಗಪುರ ಮೂಲದ ಎಂಎಂಎ ಸಂಸ್ಥೆ ‘ಇವಾಲ್ವ್‌’ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಸದ್ಯ ಚೊಚ್ಚಲ ಟೂರ್ನಿ ‘ಒನ್‌’ ಚಾಂಪಿಯನ್‌ಷಿಪ್‌ ಗೆದ್ದುಕೊಳ್ಳಲು ಎದುರು ನೋಡುತ್ತಿದ್ದಾರೆ.

ರಿತು ಪೋಗಟ್‌ ಅಲ್ಲದೆ ನಾಲ್ಕು ಬಾರಿಯ ದೆಹಲಿ ರಾಜ್ಯದ ಕುಸ್ತಿ ಚಾಂಪಿಯನ್‌ ರೋಷನ್‌ ಮೈನಮ್‌ ಕೂಡ 'ಇವಾಲ್ವ್‌' ಸಂಸ್ಥೆಯಸದಸ್ಯೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.