ನವದೆಹಲಿ: ಮೇ 20 ರಿಂದ 29 ರವರೆಗೆ ಯುರೋಪ್ ಪ್ರವಾಸ ಕೈಗೊಳ್ಳಲಿರುವ 20 ಸದಸ್ಯರ ಭಾರತ ಜೂನಿಯರ್ ಪುರುಷರ ಹಾಕಿ ತಂಡವನ್ನು ಡಿಫೆಂಡರ್ ರೋಹಿತ್ ಮುನ್ನಡೆಸಲಿದ್ದಾರೆ. ಶಾರದಾನಂದ ತಿವಾರಿ ಉಪನಾಯಕರಾಗಿದ್ದಾರೆ.
ಪ್ರವಾಸದಲ್ಲಿ ಭಾರತವು ಬೆಲ್ಜಿಯಂ, ಜರ್ಮನಿ ಮತ್ತು ನೆದರ್ಲೆಂಡ್ಸ್– ಈ ಮೂರು ರಾಷ್ಟ್ರಗಳಲ್ಲಿ ಐದು ಪಂದ್ಯಗಳನ್ನು ಆಡಲಿದೆ.
ಭಾರತ ತನ್ನ ಮೊದಲ ಪಂದ್ಯವನ್ನು ಮೇ 20 ರಂದು ಆಂಟ್ವರ್ಪ್‌ನಲ್ಲಿ ಬೆಲ್ಜಿಯಂ ವಿರುದ್ಧ ಆಡಲಿದ್ದು, ಮೇ 22 ರಂದು ನೆದರ್ಲೆಂಡ್ಸ್‌ನ ಬ್ರೆಡಾದಲ್ಲಿ ಅದೇ ದೇಶದ ವಿರುದ್ಧ ಎದುರಿಸಲಿದೆ.
ಮೇ 23ರಂದು ಬ್ರೆಡಾದಲ್ಲಿ ನೆದರ್ಲೆಂಡ್ಸ್ ಕ್ಲಬ್ ತಂಡ ಬ್ರೆಡೇಸ್ ಹಾಕಿ ವೆರೆನಿಜಿಂಗ್ ಪುಷ್ ವಿರುದ್ಧ ಭಾರತ ಸೆಣಸಲಿದ್ದು, ಮೇ 28ರಂದು ಜರ್ಮನಿ ವಿರುದ್ಧ ಸೆಣಸಲಿದೆ. ಪ್ರವಾಸದ ಕೊನೆಯ ಪಂದ್ಯವನ್ನು ಮೇ 29 ರಂದು ಜರ್ಮನಿ ವಿರುದ್ಧ ಆಡಲಿದೆ.
‘ಶಿಬಿರದಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದೇವೆ. ಇತರ ದೇಶಗಳ ತಂಡಗಳ ವಿರುದ್ಧ ಆಡುವುದರಿಂದ ಆಟದಲ್ಲಿ ಸುಧಾರಣೆ ಕಾಣುವುದರ ಜತೆಗೆ ಉತ್ತಮ ಪ್ರದರ್ಶನಕ್ಕೂ ಅವಕಾಶ ದೊರೆಯಲಿದೆ’ ಎಂದು ನಾಯಕ ರೋಹಿತ್ ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಇದು ಅದ್ಭುತ ಅನುಭವವಾಗಲಿದೆ. ನಮ್ಮ ಸಾಮರ್ಥ್ಯಗಳನ್ನು ಪತ್ತೆ ಮಾಡಲು ಹಾಗೂ ಯಾವ ಕ್ಷೇತ್ರದಲ್ಲಿ ಹೆಚ್ಚು ಗಮನ ಹರಿಸಬೇಕು ಎಂಬುದನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ’ ಎಂದು ತಂಡದ ಉಪನಾಯಕ ಉಪನಾಯಕ ಶರ್ದಾನಂದ ತಿವಾರಿ ಹೇಳಿದ್ದಾರೆ.
ತಂಡ: ಗೋಲ್ ಕೀಪರ್ಸ್: ಪ್ರಿನ್ಸ್ ದೀಪ್ ಸಿಂಗ್, ಬಿಕ್ರಮ್ ಜಿತ್ ಸಿಂಗ್.
ಡಿಫೆಂಡರ್ಸ್: ಶಾರದಾನಂದ ತಿವಾರಿ, ಯೋಗಂಬರ ರಾವತ್, ಅನ್ಮೋಲ್ ಎಕ್ಕಾ, ರೋಹಿತ್, ಮನೋಜ್ ಯಾದವ್, ಟೇಲ್ ಪ್ರಿಯೋ ಬಾರ್ಟಾ.
ಮಿಡ್ ಫೀಲ್ಡರ್ಸ್: ಅಂಕಿತ್ ಪಾಲ್, ರೋಶನ್ ಕುಜುರ್, ಬಿಪಿನ್ ಬಿಲ್ವಾರ್ ರವಿ, ಮುಖೇಶ್ ಟೊಪ್ಪೊ, ಮನ್ಮೀತ್ ಸಿಂಗ್, ವಚನ್ ಎಚ್.ಎ.
ಫಾರ್ವರ್ಡ್ಸ್: ಸೌರಭ್ ಆನಂದ್ ಕುಶ್ವಾಹ, ಅರ್ಷ್‌ದೀಪ್ ಸಿಂಗ್, ಗುರ್ಜೋತ್ ಸಿಂಗ್, ಮೊಹಮ್ಮದ್. ಕೊನಿನ್ ಡ್ಯಾಡ್, ದಿಲ್ರಾಜ್ ಸಿಂಗ್, ಗುರುಸೇವಕ್ ಸಿಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.