ಬೆಂಗಳೂರು: ಡಿವೈಇಎಸ್ ಮೈಸೂರು, ಬೀಗಲ್ಸ್ ಬಿ.ಸಿ, ಮೌಂಟ್ಸ್ ಕ್ಲಬ್ ಮತ್ತು ನೈರುತ್ಯ ರೈಲ್ವೆ ತಂಡಗಳು ಎಸ್.ಎಂ.ಎನ್ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ಮಾತೃ ಕಪ್ ಮಹಿಳೆಯರ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಸೂಪರ್ ಲೀಗ್ ಹಂತ ತಲುಪಿದವು.
ನಗರದ ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ಗುರುವಾರ ನಡೆದ ನಾಕೌಟ್ ಹಂತದ ಪಂದ್ಯಗಳಲ್ಲಿ ಡಿವೈಇಎಸ್ ಮೈಸೂರು ತಂಡವು 85–57ರಿಂದ ಡಿವೈಇಎಸ್ ವಿದ್ಯಾನಗರ ತಂಡವನ್ನು ಸೋಲಿಸಿತು. ಮೈಸೂರು ತಂಡದ ಪರ ಪ್ರೀತಿ 19 ಮತ್ತು ಸಾನಿಕಾ 16 ಅಂಕ ಗಳಿಸಿದರೆ, ವಿದ್ಯಾನಗರ ಪರ ಇಶಿತಾ 20 ಮತ್ತು ನಿರೀಕ್ಷಾ 19 ಪಾಯಿಂಟ್ಸ್ ತಂದಿತ್ತರು.
ಬೀಗಲ್ಸ್ ತಂಡವು 72–55ರಿಂದ ಕೆ.ಎಸ್. ಹೆಗ್ಡೆ ನಿಟ್ಟೆ ತಂಡವನ್ನು ಸೋಲಿಸಿತು. ಬೀಗಲ್ಸ್‌ನ ಸಂಜನಾ ರಮೇಶ್ ಮತ್ತು ಸಂಜನಾ ತಲಾ 18 ಅಂಕ ಗಳಿಸಿದರು. ನಿಟ್ಟೆ ತಂಡದ ಪರ ಬಿಂದುಶ್ರೀ 16 ಮತ್ತು ಹಂಸಾ 12 ಪಾಯಿಂಟ್ಸ್ ಗಳಿಸಿದರು.
ಮೌಂಟ್ಸ್ ಕ್ಲಬ್ ತಂಡವು 66–50ರಿಂದ ರಾಜ್‌ಮಹಲ್ ವಿರುದ್ಧ ಗೆಲುವು ಸಾಧಿಸಿತು. ಮೌಂಟ್ಸ್‌ನ ನಿಧಿ 24 ಮತ್ತು ರಾಜ್‌ಮಹಲ್‌ನ ಶ್ರೇಯಾ 12 ಅಂಕ ಗಳಿಸಿದರು.
ಇದಕ್ಕೂ ಮುನ್ನ ನಡೆದ ಲೀಗ್ ಪಂದ್ಯಗಳಲ್ಲಿ ಮೌಂಟ್ಸ್ ಕ್ಲಬ್ ತಂಡವು 72–49ರಿಂದ ಡಿಆರ್‌ಡಿಒ ವಿರುದ್ಧ; ನೈರುತ್ಯ ರೈಲ್ವೆ ತಂಡವು 76–38ರಿಂದ ಭಾರತ್ ಎಸ್.ಯು ವಿರುದ್ಧ; ಕೆ.ಎಸ್.ಹೆಗ್ಡೆ ನಿಟ್ಟೆ ತಂಡವು 39–29ರಿಂದ ಎಚ್‌ಬಿಆರ್ ಬಿ.ಸಿ ವಿರುದ್ಧ; ಡಿವೈಇಎಸ್ ವಿದ್ಯಾನಗರ ತಂಡವು 50–26ರಿಂದ ಧಾರವಾಡ ಜಿಲ್ಲೆ ‘ಎ’ ವಿರುದ್ಧ; ರಾಜ್‌ಮಹಲ್ ಬಿ.ಸಿ ತಂಡವು 68–46ರಿಂದ ಧಾರವಾಡ ಜಿಲ್ಲೆ ‘ಬಿ’ ವಿರುದ್ಧ ಗೆಲುವು ಸಾಧಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.