ADVERTISEMENT

ಬೇರ್ಪಟ್ಟ ಶಕೀರಾ– ಜೆರಾರ್ಡ್‌ ಪಿಕೆ ಜೋಡಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 15:55 IST
Last Updated 4 ಜೂನ್ 2022, 15:55 IST
ಜೆರಾರ್ಡ್‌ ಪಿಕೆ ಹಾಗೂ ಶಕೀರಾ
ಜೆರಾರ್ಡ್‌ ಪಿಕೆ ಹಾಗೂ ಶಕೀರಾ   

ಮ್ಯಾಡ್ರಿಡ್‌ (ಎಪಿ): ಪಾಪ್‌ ಗಾಯಕಿ, ಕೊಲಂಬಿಯದ ಶಕೀರಾ ಮತ್ತು ಸ್ಪೇನ್‌ ಫುಟ್‌ಬಾಲ್‌ ತಂಡದ ಆಟಗಾರ ಜೆರಾರ್ಡ್‌ ಪಿಕೆ ತಮ್ಮ 12 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದ್ದಾರೆ.

2010ರ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಪ್ರಚಾರದ ವೇಳೆ ಶಕೀರಾ ಅವರಿಗೆ ಪಿಕೆ ಪರಿಚಯವಾಗಿತ್ತು. ಅಂದಿನಿಂದ ಇಬ್ಬರೂ ಜತೆಗೆ ವಾಸವಿದ್ದರು. ಇವರಿಗೆ ಸಶಾ ಮತ್ತು ಮಿಲಾನ್‌ ಹೆಸರಿನ ಇಬ್ಬರು ಮಕ್ಕಳಿದ್ದಾರೆ. 2010ರ ವಿಶ್ವಕಪ್‌ ಟೂರ್ನಿಯ ಪ್ರಚಾರ ಗೀತೆ ‘ವ‌ಕಾ ವಕಾ’, ಶಕೀರಾ ಅವರಿಗೆ ಭಾರೀ ಜನಪ್ರಿಯತೆ ತಂದುಕೊಟ್ಟಿತ್ತು.

‘ನಾವು ಪರಸ್ಪರ ದೂರವಾಗುತ್ತಿರುವ ಸುದ್ದಿಯ‌ನ್ನು ಬಹಳ ವಿಷಾದದಿಂದ ಪ್ರಕಟಿಸುತ್ತಿದ್ದೇವೆ’ ಎಂದು ಇಬ್ಬರೂ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಮಕ್ಕಳ ಯೋಗಕ್ಷೇಮ ನಮ್ಮ ಆದ್ಯತೆಯಾಗಿದ್ದು, ಅದಕ್ಕಾಗಿ, ನಮ್ಮ ಖಾಸಗಿತನವನ್ನು ಗೌರವಿಸಬೇಕೆಂದು ಕೇಳಿಕೊಳ್ಳುತ್ತೇವೆ’ ಎಂದಿದ್ದಾರೆ.

45 ವರ್ಷದ ಶಕೀರಾ ಅವರು ‘ಹಿಪ್ಸ್‌ ಡೋಂಟ್‌ ಲೈ’ ಹಾಡಿನ ಮೂಲಕ ಜಾಗತಿಕ ಮನ್ನಣೆ ಗಳಿಸಿಕೊಂಡಿದ್ದಾರೆ. 35 ವರ್ಷದ ಪಿಕೆ, ಸ್ಪೇನ್‌ ತಂಡ 2010ರ ವಿಶ್ವಕಪ್‌ ಮತ್ತು 2012 ರ ಯೂರೋಪಿಯನ್‌ ಚಾಂಪಿಯನ್‌ಷಿಪ್ ಗೆಲ್ಲುವಲ್ಲಿ ಪ್ರಮಖ ಪಾತ್ರ ವಹಿಸಿದ್ದರು. ಅವರು ಎಫ್‌ಸಿ ಬಾರ್ಸಿಲೋನಾ ತಂಡದಲ್ಲಿ ಆಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.