ADVERTISEMENT

ಡುರಾಂಡ್‌ ಕಪ್‌: ಸೆಮಿಫೈನಲ್‌ಗೆ ಶಿಲ್ಲಾಂಗ್‌, ನಾರ್ತ್‌ಈಸ್ಟ್‌ ತಂಡಗಳು

ಪಿಟಿಐ
Published 16 ಆಗಸ್ಟ್ 2025, 16:10 IST
Last Updated 16 ಆಗಸ್ಟ್ 2025, 16:10 IST
ಶಿಲ್ಲಾಂಗ್‌ ಲಾಜೊಂಗ್‌ ಎಫ್‌ಸಿ ತಂಡದ ಪರ ಗೋಲು ದಾಖಲಿಸಿದ ಸನಾ ಮೈಲ್ಲಿಂಪ್ಡಾ
ಶಿಲ್ಲಾಂಗ್‌ ಲಾಜೊಂಗ್‌ ಎಫ್‌ಸಿ ತಂಡದ ಪರ ಗೋಲು ದಾಖಲಿಸಿದ ಸನಾ ಮೈಲ್ಲಿಂಪ್ಡಾ   

ಶಿಲ್ಲಾಂಗ್‌: ಮೊದಲಾರ್ಧದ ಹಿನ್ನಡೆಯಿಂದ ಚೇತರಿಸಿಕೊಂಡ ಆತಿಥೇಯ ಶಿಲ್ಲಾಂಗ್‌ ಲಾಜೊಂಗ್‌ ಎಫ್‌ಸಿ ತಂಡವು 134ನೇ ಆವೃತ್ತಿಯ ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿತು. 

ಇಲ್ಲಿನ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಶಿಲ್ಲಾಂಗ್‌ ತಂಡವು 2–1 ಗೋಲುಗಳಿಂದ ಇಂಡಿಯನ್ ನೇವಿ ಎಫ್‌ಟಿ ತಂಡವನ್ನು ಮಣಿಸಿತು.

ವಿಜಯ್ ಮರಾಂಡಿ ಅವರು 38ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ನೇವಿ ತಂಡಕ್ಕೆ ಮೊದಲಾರ್ಧದಲ್ಲಿ (1–0) ಮುನ್ನಡೆ ಒದಗಿಸಿದ್ದರು. ಆದರೆ, ಉತ್ತರಾರ್ಧದಲ್ಲಿ ದಮೈತ್‌ಫಾಂಗ್ ಲಿಂಗ್ಡೊ (69ನೇ ನಿಮಿಷ) ಮತ್ತು ಸನಾ ಮೈಲ್ಲಿಂಪ್ಡಾ (79ನೇ ನಿ) ಅವರು ಶಿಲ್ಲಾಂಗ್‌ ಪರ ಗೋಲು ಗಳಿಸಿ, ಗೆಲುವಿನ ರೂವಾರಿಯಾದರು. 

ADVERTISEMENT

ಮಂಗಳವಾರ ನಡೆಯುವ ಸೆಮಿಫೈನಲ್‌ನಲ್ಲಿ ಶಿಲ್ಲಾಂಗ್‌ ತಂಡವು ಹಾಲಿ ಚಾಂಪಿಯನ್‌ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡವನ್ನು ಎದುರಿಸಲಿದೆ. ದಿನದ ಮತ್ತೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ನಾರ್ತ್‌ಈಸ್ಟ್‌ ತಂಡವು 4–0 ಯಿಂದ ಬೋಡೊಲ್ಯಾಂಡ್‌ ಎಫ್‌ಸಿ ತಂಡವನ್ನು ಸುಲಭವಾಗಿ ಮಣಿಸಿತು.

ಇಂದಿನ ಪಂದ್ಯಗಳು: ಕ್ವಾರ್ಟರ್‌ ಫೈನಲ್‌ ಹಂತದ ಉಳಿದ ಪಂದ್ಯಗಳಲ್ಲಿ ಜೆಮ್ಶೆಡ್‌ಪುರ ಎಫ್‌ಸಿ ತಂಡವು ಡೈಮಂಡ್ ಹಾರ್ಬರ್ ಎಫ್‌ಸಿ ವಿರುದ್ಧ; ಮೋಹನ್‌ ಬಾಗನ್‌ ಸೂಪರ್‌ ಜೈಂಟ್ಸ್‌ ತಂಡವು ಇಮಾಮಿ ಈಸ್ಟ್ ಬೆಂಗಾಲ್ ಎಫ್‌ಸಿ ವಿರುದ್ಧ ಸೆಣಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.