ADVERTISEMENT

ದಸರಾ ಕ್ರೀಡಾಕೂಟ: ಶ್ರೇಯಾ ರಾಜೇಶ್‌ಗೆ ಚಿನ್ನ ಟ್ರಿಪಲ್

‘ಸಿ.ಎಂ. ಕಪ್‌’ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ

ಆರ್.ಜಿತೇಂದ್ರ
Published 25 ಸೆಪ್ಟೆಂಬರ್ 2025, 0:30 IST
Last Updated 25 ಸೆಪ್ಟೆಂಬರ್ 2025, 0:30 IST
<div class="paragraphs"><p>ಮೂರು ಬಂಗಾರದ ಪದಕಗಳನ್ನು ಗೆದ್ದ ಶ್ರೇಯಾ ರಾಜೇಶ್</p></div>

ಮೂರು ಬಂಗಾರದ ಪದಕಗಳನ್ನು ಗೆದ್ದ ಶ್ರೇಯಾ ರಾಜೇಶ್

   

– ಪ್ರಜಾವಾಣಿ ಚಿತ್ರ

ಮೈಸೂರು: ಟ್ರ್ಯಾಕ್‌ನಲ್ಲಿ ಜಿಂಕೆಯಂತೆ ಓಡಿದ ಬೆಂಗಳೂರು ನಗರ ಅಥ್ಲೀಟ್‌ ಶ್ರೇಯಾ ರಾಜೇಶ್‌ ಇಲ್ಲಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಸಿ.ಎಂ. ಕಪ್‌’ ರಾಜ್ಯಮಟ್ಟದ ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ ಬುಧವಾರ ಕೂಟ ದಾಖಲೆಯೊಂದಿಗೆ ಮೂರು ಚಿನ್ನ ಗೆದ್ದರು. 

ADVERTISEMENT

ಮಹಿಳೆಯರ 100 ಮೀ. ಹರ್ಡರ್ಲ್ಸ್‌ನಲ್ಲಿ  14.31 ಸೆಕೆಂಡ್‌ಗಳಲ್ಲಿ ಕ್ರಮಿಸಿದ ಅವರು, ಚಂದ್ರಿಕಾ ಹೆಸರಿನಲ್ಲಿದ್ದ 15.45 ಸೆಕೆಂಡುಗಳ ದಾಖಲೆಯನ್ನು ಅಳಿಸಿದರು. 200 ಮೀ. ಓಟವನ್ನು 24.89 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬಂಗಾರಕ್ಕೆ ಕೊರಳೊಡ್ಡಿದರು. ಮಹಿಳೆಯರ 4X100 ರಿಲೆಯಲ್ಲಿ ತಮ್ಮ ತಂಡದ ಜೊತೆಗೂಡಿ 48.79 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಕೂಟ ದಾಖಲೆ ಸಹಿತ ಚಿನ್ನದ ಸಾಧನೆ ಮಾಡಿದರು.

ಕ್ರೀಡಾಕೂಟದ 2ನೇ ದಿನವಾದ ಬುಧವಾರ ಒಟ್ಟು 6 ಕೂಟ ದಾಖಲೆಗಳು ನಿರ್ಮಾಣವಾದವು. ಮಹಿಳೆಯರ ಲಾಂಗ್‌ ಜಂಪ್‌ನಲ್ಲಿ ಉಡುಪಿಯ ಶ್ರೀದೇವಿಕಾ ಶೆಟ್ಟಿ, ಶಾಟ್‌ಪಟ್‌ನಲ್ಲಿ ಬೆಂಗಳೂರಿನ ಟಿ. ನಿವೇದಿತಾ ಹಾಗೂ ಪುರುಷರ 800 ಮೀ. ಓಟದಲ್ಲಿ ಶಿವಮೊಗ್ಗದ ಎಂ.ಎಸ್. ಆಶ್ರಿತ್‌ ಹಾಗೂ 5000 ಮೀ. ಓಟದಲ್ಲಿ ಧಾರವಾಡದ ಬಾಲು ಹೆಗ್ರಿ ಕೂಟ ದಾಖಲೆ ನಿರ್ಮಿಸಿದರು.

ಫಲಿತಾಂಶ:

ಅಥ್ಲೆಟಿಕ್ಸ್‌:

ಪುರುಷರು:

200 ಮೀ. ಓಟ: ಎಂ.ಡಿ. ದರ್ಶನ್ ( ಶಿವಮೊಗ್ಗ. ಕಾಲ: 22.07 ಸೆಕೆಂಡ್‌)–1, ಜಿ.ಸಿ. ಗುರುಪ್ರಸಾದ್ (ಮೈಸೂರು)–2, ಎಂ.ಡಿ. ಪೈಗಂಬರ್ ಗೌಂಡಿ ( ವಿಜಯಪುರ)–3; 800 ಮೀ. ಓಟ: ಎಂ.ಎಸ್. ಆಶ್ರಿತ್‌ (ಶಿವಮೊಗ್ಗ. ಕಾಲ: 1ನಿಮಿಷ, 50.71 ಸೆಕೆಂಡ್‌)–1, ಎಸ್. ಕಮಲ ಕಣ್ಣನ್‌ ( ಬೆಂಗಳೂರು)–2, ಎಚ್‌.ವಿ. ಚಿಂತನ್ (ಬೆಂಗಳೂರು)–3; 5000 ಮೀ. ಓಟ: ಬಾಲು ಯಲ್ಲಪ್ಪ ಹೆಗ್ರಿ (ಧಾರವಾಡ. ಕಾಲ: 15ನಿಮಿಷ, 9.86 ಸೆಕೆಂಡ್‌)–1, ಗುರುಪ್ರಸಾದ್ (ಬೆಂಗಳೂರು)–2, ವಿನಾಯಕ ರಾಥೋಡ್ (ಧಾರವಾಡ)–3; 110 ಮೀ. ಹರ್ಡಲ್ಸ್‌: ಲಬೆಕ್‌ ಎಸ್. ನಾಲಬಂದ (ಬೆಳಗಾವಿ. ಕಾಲ: 16.25 ಸೆಕೆಂಡ್‌)–1, ರತನ್‌ಗೌಡ ಪಾಟೀಲ (ಬೆಂಗಳೂರು)–2, ಎಚ್‌.ಎಂ. ಹರೀಶ್ (ಮೈಸೂರು)–3.

ಲಾಂಗ್‌ ಜಂಪ್‌: ಪುರುಷೋತ್ತಮ್‌ (ಬೆಂಗಳೂರು. ಉದ್ದ: 7.37 ಮೀಟರ್)–1, ಬಿ. ನವೀನ್‌ (ಬೆಂಗಳೂರು)–2, ಜಫರ್‌ಖಾನ್‌ (ಬೆಳಗಾವಿ)–3; ಶಾಟ್‌ಪಟ್: ಪ್ರಜ್ವಲ್‌ ಶೆಟ್ಟಿ (ಉಡುಪಿ. ದೂರ: 16.16 ಮೀಟರ್‌)–1, ಎನ್. ಗಣೇಶ್ (ಉತ್ತರ ಕನ್ನಡ)–2, ಅಜಯ್‌ ಅಶೋಕ್ ಮುಜಾವರ್‌ (ಬೆಂಗಳೂರು)–3; 4X100 ರಿಲೇ: ಬೆಳಗಾವಿ ವಿಭಾಗ (ಕಾಲ: 44.08 ಸೆಕೆಂಡ್‌)–1, ಬೆಂಗಳೂರು ಗ್ರಾಮಾಂತರ ವಿಭಾಗ–2, ಕಲಬುರಗಿ ವಿಭಾಗ–3.

ಸೈಕ್ಲಿಂಗ್‌: 70 ಕಿ.ಮೀ. ಮಾಸ್‌ ಸ್ಟಾರ್ಟ್‌ ರೇಸ್‌: ಶ್ರೀನಿವಾಸ ರಜಪೂತ್‌ (ವಿಜಯಪುರ: ಕಾಲ: 1ಗಂಟೆ, 56 ನಿಮಿಷ)–1, ಯಲಗೂರಪ್ಪ ಗದ್ದಿ (ವಿಜಯಪುರ)–2, ರಾಜು ಸೊನ್ನದ (ವಿಜಯಪುರ)–3.

ಮಹಿಳೆಯರು:

ಅಥ್ಲೆಟಿಕ್ಸ್‌:

200 ಮೀ. ಓಟ: ಶ್ರೇಯಾ ರಾಜೇಶ್‌ (ಬೆಂಗಳೂರು ನಗರ. ಕಾಲ: 24.89 ಸೆಕೆಂಡ್‌)–1, ಜ್ಯೋತಿಕಾ (ಬೆಂಗಳೂರು)–2, ಶ್ರಾವಣಿ (ದಕ್ಷಿಣ ಕನ್ನಡ)–3; 800 ಮೀ. ಓಟ: ರೇಖಾ ಪಿರೋಜಿ (ದಕ್ಷಿಣ ಕನ್ನಡ. ಕಾಲ: 2ನಿಮಿಷ, 15.69 ಸೆಕೆಂಡ್‌)–1, ಶಿಲ್ಪಾ ಹೊಸಮನಿ (ಬೆಳಗಾವಿ)–2, ಅಕ್ಷರಾ (ಬೆಳಗಾವಿ)–3; 100 ಮೀ. ಹರ್ಡಲ್ಸ್‌: ಶ್ರೇಯಾ ರಾಜೇಶ್ (ಬೆಂಗಳೂರು ನಗರ. ಕಾಲ: 14.31 ಸೆಕೆಂಡ್‌)–1, ಆರ್.ಜಿ. ದೀಕ್ಷಿತಾ (ದಕ್ಷಿಣ ಕನ್ನಡ)–2, ಅಕ್ಷತಾ (ಉಡುಪಿ)–3; 4X100 ರಿಲೇ: ಬೆಂಗಳೂರು ನಗರ ವಿಭಾಗ (ಕಾಲ: 48.79 ಸೆಕೆಂಡ್‌)–1, ಬೆಳಗಾವಿ ವಿಭಾಗ–2, ಕಲಬುರಗಿ ವಿಭಾಗ–3.

ಲಾಂಗ್‌ ಜಂಪ್‌: ಶ್ರೀದೇವಿಕಾ ಶೆಟ್ಟಿ (ಉಡುಪಿ. ಉದ್ದ: 5.72 ಮೀ)–1, ಐಶ್ವರ್ಯ ಪಾಟೀಲ (ಉಡುಪಿ)–2, ಜಿ. ಮೋನಿಕಾ (ಬೆಂಗಳೂರು)–3; ಶಾಟ್‌ಟಪ್‌: ಟಿ. ನಿವೇದಿತಾ (ಬೆಂಗಳೂರು. ದೂರ: 14.15 ಮೀ.)–1, ಎಂ. ಸಂಜನಾ ರೆಡ್ಡಿ (ಬೆಂಗಳೂರು)–2, ಬಿ. ಸುಷ್ಮಾ (ದಕ್ಷಿಣ ಕನ್ನಡ)–3.

ಸೈಕ್ಲಿಂಗ್‌:

30 ಕಿ.ಮೀ. ರೇಸ್: ಗ್ಲಿಯೊನಾ ಏಂಜಲ್ ಡಿಸೋಜ (ಉಡುಪಿ. ಕಾಲ: 1ಗಂಟೆ, 4 ನಿಮಿಷ, 35 ಸೆಕೆಂಡ್‌)–1, ಕೀರ್ತಿ ನಾಯಕ್‌ (ಬಾಗಲಕೋಟೆ)–2, ಕಿಯಾನ (ಬೆಂಗಳೂರು)–3.

ಮಹಿಳೆಯರ ಲಾಂಗ್‌ಜಂ‍ಪ್‌ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ ಉಡುಪಿಯ ಶ್ರೀದೇವಿಕಾ ಶೆಟ್ಟಿ ಜಿಗಿತದ ಪರಿ – ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಪುರುಷರ 5000 ಮೀ. ಓಟದಲ್ಲಿ ಚಿನ್ನ ಗೆದ್ದ ಬಾಲು ಹೆಗ್ರಿ
ಮಹಿಳೆಯರ 800 ಮೀ. ಓಟದಲ್ಲಿ ಮೊದಲಿಗರಾಗಿ ಗುರಿಯತ್ತ ಮುನ್ನುಗ್ಗಿದ ರೇಖಾ ಪಿರೋಜಿ ( ಎಡ) ಹಾಗೂ ದ್ವಿತೀಯ ಸ್ಥಾನ ಪಡೆದ ಶಿಲ್ಪಾ ಹೊಸಮನಿ –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.