ಬೆಂಗಳೂರು: ಶುಭ್ ಚೌಧರಿ ಅವರು, ಎಂಬಸಿ ಅಂತರರಾಷ್ಟ್ರೀಯ ರೈಡಿಂಗ್ ಶಾಲೆಯಲ್ಲಿ ಈಚೆಗೆ ನಡೆದ ಕರ್ನಾಟಕ ರಾಜ್ಯ ಈಕ್ವೆಸ್ಟ್ರಿಯನ್ ಸ್ಪರ್ಧೆಯಲ್ಲಿ ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದುಕೊಂಡರು.
15 ವರ್ಷ ವಯಸ್ಸಿನ ಶುಭ್, ಶೋ ಜಂಪಿಂಗ್ ವಿಭಾಗದ 110 ಸೆಂ.ಮೀ. ಸ್ಪರ್ಧೆಯಲ್ಲಿ ತಲಾ ಒಂದು ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು. 100 ಸೆಂ.ಮೀ. ಸ್ಪರ್ಧೆಯಲ್ಲಿ ರಜತ ಪದಕವನ್ನು ತಮ್ಮದಾಗಿಸಿಕೊಂಡರು.
ಶುಭ್ ಅವರು ಮೂಲತಃ ಚೆನ್ನೈನವರಾಗಿದ್ದು, ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.