ADVERTISEMENT

ವಿಯಟ್ನಾಂ ಓಪನ್ ಬ್ಯಾಡ್ಮಿಂಟನ್ ಟೂರ್ನಿ | ಸೆಮಿಫೈನಲ್‌ಗೆ ಸಿಕ್ಕಿ– ರೋಹನ್‌

ಪಿಟಿಐ
Published 30 ಸೆಪ್ಟೆಂಬರ್ 2022, 12:40 IST
Last Updated 30 ಸೆಪ್ಟೆಂಬರ್ 2022, 12:40 IST

ಹೊ ಚಿ ಮಿನ್ ಸಿಟಿ: ಭಾರತದ ರೋಹನ್ ಕಪೂರ್ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರು ವಿಯೆಟ್ನಾಂ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಇಲ್ಲಿ ನಡೆಯುತ್ತಿರುವ ಟೂರ್ನಿಯ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಶ್ರೇಯಾಂಕರಹಿತ ಭಾರತದ ಜೋಡಿಯು ಶುಕ್ರವಾರ 21-19 21-17ರಿಂದ ಮೂರನೇ ಶ್ರೇಯಾಂಕದ, ಮಲೇಷ್ಯಾದ ಚಾನ್‌ ಪೆಂಗ್ ಸೂನ್‌ ಮತ್ತು ಚಿಯಾ ಯೀ ಸೀ ಅವರನ್ನು ಪರಾಭವಗೊಳಿಸಿದರು.

39 ನಿಮಿಷಗಳ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಸಿಕ್ಕಿ–ರೋಹನ್ ಒತ್ತಡ ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾದರು.

ADVERTISEMENT

ನಾಲ್ಕರ ಘಟ್ಟದ ಪಂದ್ಯದಲ್ಲಿ ಸಿಕ್ಕಿ– ರೋಹನ್‌ ಅವರು ಇಂಡೊನೇಷ್ಯಾದ ರೆಹಾನ್ ನೌಫಲ್‌ ಕುಶರ್ಜಂತೊ – ಲಿಸಾ ಅಯು ಕುಸುಮಾವತಿ ಅವರನ್ನು ಎದುರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.