ಬೆಂಗಳೂರು: ನೈಋತ್ಯ ರೈಲ್ವೆ ಮತ್ತು ಬೀಗಲ್ಸ್ ತಂಡಗಳು ಎಸ್.ಎಂ.ಎನ್ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ಮಾತೃ ಕಪ್ ಮಹಿಳೆಯರ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ತಲುಪಿವೆ.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸೂಪರ್ ಲೀಗ್ ಪಂದ್ಯದಲ್ಲಿ ನೈಋತ್ಯ ರೈಲ್ವೆ ತಂಡ ಡಿವೈಇಎಸ್ ಮೈಸೂರು ತಂಡವನ್ನು 78–49 ಪಾಯಿಂಟ್ಸ್‌ಗಳಿಂದ ಭರ್ಜರಿ ಗೆಲುವು ಪಡೆಯಿತು.
ಇನ್ನೊಂದು ಪಂದ್ಯದಲ್ಲಿ ಬೀಗಲ್ಸ್ ತಂಡ ಎದುರಾಳಿ ಮೌಂಟ್ಸ್ ಕ್ಲಬ್ ತಂಡವನ್ನು76–54 ಪಾಯಿಂಟ್ಸ್‌ಗಳಿಂದ ಸೋಲಿಸಿತು.
ಇಂದು ನಡೆಯುವ ಫೈನಲ್ ಪಂದ್ಯದಲ್ಲಿ ನೈಋತ್ಯ ರೈಲ್ವೆ ಮತ್ತು ಬೀಗಲ್ಸ್ ಬಿಸಿ ತಂಡಗಳು ಸೆಣಸಲಿವೆ. ಮೂರು ಮತ್ತು ನಾಲ್ಕನೆ ಸ್ಥಾನಕ್ಕಾಗಿ ಡಿವೈಇಎಸ್ ತಂಡ ಮತ್ತು ಮೌಂಟ್ಸ್ ಕ್ಲಬ್ ತಂಡಗಳು ಪೈಪೋಟಿ ನಡೆಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.