ಸಾಂಕೇತಿಕ ಚಿತ್ರ
ಪ್ಯಾರಿಸ್: ಅಂತರರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿರುವ ಪಿ.ಆರ್.ಶ್ರೀಜೇಶ್ ಅವರು ಶೀಘ್ರದಲ್ಲೇ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಹಾಕಿ ಇಂಡಿಯಾ ಅವರನ್ನು ರಾಷ್ಟ್ರೀಯ ಕಿರಿಯರ ತಂಡದ ಕೋಚ್ ಆಗಿ ಘೋಷಿಸಲು ನಿರ್ಧರಿಸಿದೆ.
36 ವರ್ಷದ ಶ್ರೀಜೇಶ್ ಅವರು ಗುರುವಾರ ನಡೆದ ಕಂಚಿನ ಪದಕ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಭಾರತ ಜಯ ಗಳಿಸಿದ ನಂತರ ತಮ್ಮ ಹಾಕಿ ವೃತ್ತಿಜೀವನಕ್ಕೆ ತೆರೆ ಎಳೆದರು.
‘ನಾವು ಕೆಲವೇ ದಿನಗಳಲ್ಲಿ ಶ್ರೀಜೇಶ್ ಅವರನ್ನು ಪುರುಷರ ಜೂನಿಯರ್ ತಂಡದ ಕೋಚ್ (21 ವರ್ಷದೊಳಗಿನವರು) ಆಗಿ ನೇಮಕ ಮಾಡುತ್ತೇವೆ. ಈ ಕುರಿತು ಅವರೊಂದಿಗೆ ಚರ್ಚಿಸಿದ್ದೇವೆ. ಯುವಕರಿಗೆ ಮಾರ್ಗದರ್ಶನ ನೀಡಲು ಅವರಿಗಿಂತ ಉತ್ತಮ ವ್ಯಕ್ತಿ ಸಿಗಲ್ಲ’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಪ್ಯಾರಿಸ್‌ನಲ್ಲಿ ಪಿಟಿಐಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.