ವಿವೇಕ್ಸ್ ಬಿ.ಸಿ ತಂಡದ ಸ್ತುತಿ ಎಸ್. (ಎಡ) ಮತ್ತು ಮೈಸೂರು ಜಿಲ್ಲೆ ಎ ತಂಡದ ರಿಶಾ ರೂಪೇಶ್‌ಕುಮಾರ್ ಅವರು ಚೆಂಡಿಗಾಗಿ ಸೆಣಸಿದರು
–ಚಿತ್ರ: ಬಿ.ಕೆ. ಜನಾರ್ದನ್
ಬೆಂಗಳೂರು: ರೋನಕ್ ಅವರ ಆಕರ್ಷಕ ಆಟದ ಹೊರತಾಗಿಯೂ ಮೈಸೂರು ಜಿಲ್ಲೆ ಎ ತಂಡವು ಡಿ.ಎನ್. ರಾಜಣ್ಣ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಬಾಲಕರ ವಿಭಾಗದ ಪಂದ್ಯದಲ್ಲಿ 72–93ರಿಂದ ಎಂಎನ್‌ಕೆ ರಾವ್ ಪಾರ್ಕ್ ಬಿ.ಸಿ ತಂಡಕ್ಕೆ ಮಣಿಯಿತು.
ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ಮಂಗಳವಾರ ನಡೆದ ರೌಂಡ್ ರಾಬಿನ್ ಲೀಗ್ ಪಂದ್ಯದಲ್ಲಿ ಮೈಸೂರು ಜಿಲ್ಲೆ ಎ ತಂಡದ ಪರ ರೋನಕ್ 40 ಅಂಕ ಕಲೆಹಾಕಿ, ಗಮನ ಸೆಳೆದರು. ಎಂಎನ್‌ಕೆ ರಾವ್ ಪಾರ್ಕ್ ಬಿ.ಸಿ ತಂಡದ ಪರ ಅವಿನಾಶ್ 31 ಅಂಕ ಹಾಗೂ ಯಶಸ್ 18 ಅಂಕಗಳನ್ನು ಗಳಿಸಿದರು.
ಬಾಲಕಿಯರ ವಿಭಾಗದಲ್ಲಿ ಮಂಡ್ಯ ಜಿಲ್ಲಾ ತಂಡವು 61–54ರಿಂದ ಬೆಂಗಳೂರು ವ್ಯಾನ್‌ಗಾರ್ಡ್ಸ್ ತಂಡದ ಎದುರು ಜಯ ಗಳಿಸಿತು.
ಫಲಿತಾಂಶ: ರೌಂಡ್ ರಾಬಿನ್ ಲೀಗ್: ಬಾಲಕರು: ಎಂಎನ್‌ಕೆ ರಾವ್ ಪಾರ್ಕ್ ಬಿ.ಸಿ ತಂಡ 93–72ರಿಂದ ಮೈಸೂರು ಜಿಲ್ಲೆ ಎ ವಿರುದ್ಧ; ಹೂಪ್ಸ್ 7 ಬಿ.ಸಿ ತಂಡ 79–50ರಿಂದ ಎಚ್‌ಬಿಆರ್ ಬಿ.ಸಿ ತಂಡದ ವಿರುದ್ಧ ಗೆಲುವು ಸಾಧಿಸಿದವು.
ಬಾಲಕಿಯರು: ಮಂಡ್ಯ ಜಿಲ್ಲಾ ತಂಡವು 61–54ರಿಂದ ಬೆಂಗಳೂರು ವ್ಯಾನ್‌ಗಾರ್ಡ್ಸ್ ತಂಡದ ಎದುರು; ಮೈಸೂರು ಜಿಲ್ಲೆ ಎ ತಂಡ 41–25ರಿಂದ ವಿವೇಕ್ಸ್ ಬಿ.ಸಿ ತಂಡದ ಎದುರು ಜಯ ಸಾಧಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.